ಕರ್ನಾಟಕ

ಅಮೆರಿಕಾದಿಂದ ಪತ್ನಿಗೆ ತಲಾಖ್

Pinterest LinkedIn Tumblr

talaq
ಧಾರವಾಡ: ತ್ರಿವಳಿ ತಲಾಖ್ ಬಗ್ಗೆ ದೇಶಾದ್ಯಂತ ಸಾಕಷ್ಟು ಚರ್ಚೆ ನಡೆಯುತ್ತಿರುವಾಗಲೇ, ಅಮೇರಿಕಾದಲ್ಲಿರುವ ಪತಿಯೋರ್ವ ತನ್ನ ಪತ್ನಿಗೆ ಅಲ್ಲಿಂದಲೇ ತಲಾಖ್ ಹೇಳಿದ ಪ್ರಕರಣ ಬೆಳಕಿಗೆ ಬಂದಿದೆ.

ಜಿಲ್ಲೆಯ ಕೊಪ್ಪದಕೆರೆಯ ನಿವಾಸಿ ಗುಲಝಾರ್ ಎಂಬುವನೇ ಅಮೆರಿಕಾದಿಂದ ತಲಾಖ್ ಪತ್ರವನ್ನು ಕಳುಹಿಸಿದ ವ್ಯಕ್ತಿ. ಗುಲಝಾರ್ 2011ರಲ್ಲಿ ಮದರಾಮಡ್ಡಿ ಗ್ರಾಮದ ಮುಫ್ರಿನತಾಜ್ ಜೊತೆ ಮದುವೆಯಾಗಿದ್ದನು. ಮದುವೆಯಾದ ಒಂದೂವರೆ ವರ್ಷದ ನಂತರ ಪತಿ ಗುಲಝಾರ್ ಅಮೆರಿಕಾಗೆ ತೆರಳಿ ಅಲ್ಲೇ ಉಳಿದುಕೊಂಡಿದ್ದಾನೆ.

ಅಮೆರಿಕಾಗೆ ತೆರಳಿದ ನಂತರ ಪತಿ ತನ್ನ ಜೊತೆ ಕೇವಲ ಮೂರು ಬಾರಿ ಮಾತ್ರ ಫೋನಿನಲ್ಲಿ ಮಾತನಾಡಿದ್ದಾನೆ. ನಂತರ ಮುಫ್ರಿನ್‍ತಾಜ್‍ಗೆ ಅಮೇರಿಕಾದಿಂದಲೇ ತಲಾಖ್ ಹೇಳಿದ್ದಾನೆ. ಆದರೆ ಪತಿ ತನ್ನ ಮುಂದೆ ತಲಾಖ್ ಬಗ್ಗೆ ಹೇಳೇ ಇಲ್ಲ ಎಂದು ಮುಫ್ರಿನ್‍ತಾಜ್ ಹೇಳುತ್ತಿದ್ದು, ಈ ತಲಾಖ್ ಅನ್ನು ಅಸಿಂಧುಗೊಳಿಸುವಂತೆ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಪತಿ ಗುಲಝಾರ್ ಕೋರ್ಟ್‍ಗೆ ಹಾಜಾರಗದೇ ಇರುವ ಕಾರಣ, ನ್ಯಾಯಾಲಯ ಕೋರ್ಟ್ ಕಮೀಷನರ್‍ನ್ನ ನೇಮಿಸಿ ಅಮೇರಿಕದಲ್ಲಿರುವ ಪತಿಯ ಹೇಳಿಕೆಯನ್ನು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಪಡೆಯುತ್ತಿದ್ದಾರೆ.

Comments are closed.