ಕರ್ನಾಟಕ

ರಾಜಕಾಲುವೆ ಒತ್ತುವರಿ: ಒರಾಯನ್‍ ಡೆಮಾಲಿಶ್ ವಿಚಾರಣೆ ಏನಾಯ್ತು?

Pinterest LinkedIn Tumblr

orion-mall-final

ಬೆಂಗಳೂರು: ಬಡವರ ಮನೆಗಳನ್ನು ಕೆಡವಿ ಹಾಕುವಾಗ ಯಾವ ಕಾನೂನು ಅಡ್ಡಿ ಬರಲಿಲ್ಲ. ಆದರೆ ಒರಾಯನ್ ಮಾಲ್ ಒತ್ತುವರಿ ತೆರವು ಮಾಡುವ ವಿಚಾರದಲ್ಲಿ ಬಿಬಿಎಂಪಿ ಹೈಡ್ರಾಮ ಮಾಡುತ್ತಿದೆ.

ಒರಾಯನ್ ಮಾಲ್ ಒತ್ತುವರಿ ತೆರವು ಮಾಡಬೇಕೋ ಬೇಡ್ವೋ ಅನ್ನೋದು ಇವತ್ತೂ ನಿರ್ಧಾರವಾಗಲಿಲ್ಲ. ಮಲ್ಲೇಶ್ವರಂನ ಬಿಬಿಎಂಪಿ ಐಪಿಪಿ ಕಚೇರಿಯಲ್ಲಿ ಈ ಕುರಿತು ಇಂದು ವಿಚಾರಣೆ ನಡೆಯಿತು. ವಿಚಾರಣೆ ಆರಂಭವಾಗಿ 15 ನಿಮಿಷದಲ್ಲೇ ಮುಗಿದು, ವಿಚಾರಣೆ 28ಕ್ಕೆ ಮುಂದೂಡಲಾಯ್ತು.

ಈ ವೇಳೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬ್ರಿಗೇಡ್, ಜಿಡಬ್ಲ್ಯೂ ಮ್ಯಾರಿಯೇಟ್, ಇಟಾ ಮಾಲ್, ಸರ್ಕಾರಿ ಜಾಗ ಒತ್ತುವರಿ ಮಾಡಿದ್ದಾರೆ ಅಂತ ಅರ್ಜಿ ಸಲ್ಲಿಸಿದ್ದರು. ಮತ್ತೆ ವಿಚಾರಣೆ 28 ಕ್ಕೆ ನಡೆಸುತ್ತೇವೆ ಎಂದರು.

ದೂರುದಾರ ಹಾಗೂ ಸಮರ್ಪಣ ಸಂಸ್ಥೆಯ ಶಿವಕುಮಾರ್ ಮಾತನಾಡಿ, ರಾಜಕಾಲುವೆ ಒತ್ತುವರಿಯಲ್ಲಿ ಬಡವರ ಮನೆ ಹಿಂದೆ ಮುಂದೆ ನೋಡದೆ ಒಡೆದು ಹಾಕಿದ್ದಾರೆ. ದೊಡ್ಡವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಸಮರ್ಪಣ ಟ್ರಸ್ಟ್ ವತಿಯಿಂದ 2008 ರಿಂದ ಹೋರಾಟ ಮಾಡ್ತಿದ್ದೇವೆ. 3 ತಿಂಗಳಲ್ಲಿ ಕ್ರಮಕ್ಕೆ ಕೋರ್ಟ್ ಸೂಚಿಸಿತ್ತು. ಆದ್ರೆ ಇವತ್ತಿಗೂ ತೆರವಾಗಿಲ್ಲ. ನ್ಯಾಯಾಲಯ ಆದೇಶ ಉಲ್ಲಂಘನೆಯಾಗಿದೆ ಎಂದು ದೂರಿದರು.

Comments are closed.