ಅಂತರಾಷ್ಟ್ರೀಯ

ಆಧಾರ್‌ ಕಾರ್ಡ್‌ ಹೊಂದಿದ್ದರೆ 1700 ರೂಪಾಯಿಗೇ iPhone 7!!

Pinterest LinkedIn Tumblr

apple-iphone7
ಒಂದು ವೇಳೆ ನೀವು ಹೊಸ ಐಫೋನ್‌ 7 ಖರೀದಿ ಮಾಡಲು ಯೋಚನೆ ಮಾಡುತ್ತಿದ್ದರೆ, ನಿಮ್ಮ ಬಳಿ ಆಧಾರ್‌ ಕಾರ್ಡ್‌ ಇದ್ದರೆ ಇಲ್ಲಿದೆ ನಿಮಗಾಗಿ ಬೆಸ್ಟ್‌ ಆಫರ್‌. ಭಾರತದಲ್ಲಿ ಐಫೋನ್‌ 7 ಮತ್ತು 7 ಪ್ಲಸ್‌ ಬಿಡುಗಡೆ ಮಾಡಿರುವ ಆಪಲ್‌ ಇಲ್ಲಿನ ಮಾರುಕಟ್ಟೆಯಲ್ಲಿ ಡೌನ್‌ ಪೇಮೆಂಟ್‌ ಸ್ಕೀಮ್‌ ನೀಡಲು ನಿರ್ಧರಿಸಿದೆ.

ಏನಿದು ಸ್ಕೀಮ್‌?
ಈ ಸ್ಕೀಮ್‌ ಆಧಾರದ ಮೇಲೆ ಕಂಪನಿ ನಿಮಗೆ 1700 ರೂಪಾಯಿ ಡೌನ್‌ ಪೇಮೆಂಟ್‌ನಲ್ಲಿ ಹೊಸ ಐಫೋನ್‌ ನೀಡುತ್ತದೆ. ಇದರ ನಂತರ ಇನ್‌ಸ್ಟಾಲ್‌ಮೆಂಟ್‌ನಲ್ಲಿ ಹಣ ಪಾವತಿ ಮಾಡಬೇಕು. ಅಲ್ಲದೆ ಐಫೋನ್‌ನ್ನು ನೀವು ಕೇವಲ 1000 ರೂಪಾಯಿ ಮೂಲಕ ಪ್ರೀ ಬುಕ್ಕಿಂಗ್‌ ಕೂಡ ಮಾಡಬಹುದು ಎಂಬ ಮಾಹಿತಿ ಲಭ್ಯವಾಗಿದೆ.

ಏನಿದರ ವಿಶೇಷತೆ :
ಭಾರತೀಯ ಮಾರುಕಟ್ಟೆಯಲ್ಲಿ ಆ್ಯಪಲ್‌ ಐಫೋನ್‌ 7 ಮತ್ತು 7 ಪ್ಲಸ್‌ ಅಕ್ಟೋಬರ್‌‌ನಲ್ಲಿ ಬಿಡುಗಡೆಯಾಗಿದೆ. ಇದರ ಬ್ಲ್ಯಾಕ್‌ ವೇರಿಯಂಟ್‌ ಕ್ರಮವಾಗಿ 128 ಜಿಬಿ ಮತ್ತು 256 ಜಿಬಿ ಮೆಮೊರಿ ಹೊಂದಿದೆ. ಉಳಿದ ಕಲರ್‌ 32ಜಿಬಿ ಹೊಂದಿದೆ. 32 ಜಿಬಿ ಹೊಂದಿದ ಐಫೋನ್‌ ಭಾರತದಲ್ಲಿ 60,000 ರೂಪಾಯಿಗೆ ಸಿಗುತ್ತದೆ.

: ಆ್ಯಪಲ್‌ ಐಫೋನ್‌ 7 ಹಾಗೂ ಐಫೋನ್‌ 7 ಪ್ಲಸ್‌ನಲ್ಲಿ ಹೆಡ್‌ಫೋನ್‌ ವಿಭಿನ್ನವಾಗಿದೆ. ಇತರ ಫೋನ್‌ನಲ್ಲಿರುವಂತೆ ಹೆಡ್‌ಫೋನ್‌ಗೆ ವಯರ್‌ ಇರುವುದಿಲ್ಲ. ಬದಲಾಗಿ ವಯರ್‌ಲೆಸ್‌ ಆಗಿರುತ್ತದೆ.

ಐಫೋನ್‌7 ಬೆಲೆ ಎಷ್ಟಿರಬಹುದು
32 ಜಿಬಿ ಐಫೋನ್‌7 ಬೆಲೆ 5288 ಯುವಾನ್‌ ( ಸುಮಾರು 53 ಸಾವಿರ ರೂ.) , 128 ಜಿಬಿ ಐಫೋನ್‌7 ಬೆಲೆ 6088 ಯುವಾನ್‌( ಸುಮಾರು 61 ಸಾವಿರ ರೂಪಾಯಿ) 256 ಜಿಬಿ ಐಫೋನ್‌7 ಬೆಲೆ7088 ಯುವಾನ್‌ಗೆ(ಸುಮಾರು 71 ಸಾವಿರ ರೂ.) ಬಿಡುಗಡೆಯಾಗಿದೆ.

ಐಫೋನ್‌ 7 ಪ್ಲಸ್ ಬೆಲೆ ಎಷ್ಟಿರಬಹುದು
32ಜಿಬಿ ಜಿಬಿ ಐಫೋನ್‌7ಪ್ಲಸ್‌ ಬೆಲೆ 6088 ಯುವಾನ್‌(ಸುಮಾರು 61 ಸಾವಿರ ರೂ.) 128 ಜಿಬಿ ಐಫೋನ್‌7ಪ್ಲಸ್‌ ಬೆಲೆ 6888 ಯುವಾನ್‌ (ಸುಮಾರು 69 ಸಾವಿರ ರೂ.) 256 ಜಿಬಿ ಐಫೋನ್‌7ಪ್ಲಸ್‌ ಬೆಲೆ 7888 ಯುವಾನ್‌ಗೆ (ಸುಮಾರು 79 ಸಾವಿರ ರೂ.) ಬಿಡುಗಡೆಯಾಗಿದೆ.

Comments are closed.