ಕರ್ನಾಟಕ

ಪ್ರಧಾನಿ ಮೋದಿಗೆ ವಿದ್ಯಾರ್ಥಿನಿ ಪತ್ರ ಬರೆದದ್ದೇ ತಡ…ಎಚ್ಚರಗೊಂಡ ಜಿಲ್ಲಾಡಳಿತದಿಂದ ಕುಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ !

Pinterest LinkedIn Tumblr

namana1

ಮೂಡಿಗೆರೆ (ಚಿಕ್ಕಮಗಳೂರು ಜಿಲ್ಲೆ): ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಲಾ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸುದ್ದಿಯಾಗುತ್ತಿದ್ದಂತೆ ಇತ್ತ ಇಡೀ ಜಿಲ್ಲಾಡಳಿತವೇ ಕುಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

ತಾಲ್ಲೂಕಿನ ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೇಖಾನ್‌ ಹೊರಟ್ಟಿ ಗ್ರಾಮದ ಗೋಪಾಲಗೌಡ ಎಂಬುವವರ ಪುತ್ರಿಯಾದ ಎ.ಜಿ. ನಮನಾ ಪತ್ರ ಬರೆದ ಬಾಲಕಿ. ತಾಲ್ಲೂಕಿನ ಬಿದರಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿ ಅ.6 ರಂದು ಆಲೆಖಾನ್‌ ಹೊರಟ್ಟಿ ಗ್ರಾಮದಲ್ಲಿನ ಮೂಲ ಸೌಲಭ್ಯ ಸಮಸ್ಯೆಗಳ ಕುರಿತು ಪ್ರಧಾನಿಯವರಿಗೆ ಪತ್ರ ಬರೆದಿದ್ದರು.

ಪತ್ರದ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ ಪ್ರಧಾನಿ ಕಚೇರಿಯಿಂದ ಜಿಲ್ಲಾ ಪಂಚಾಯಿತಿಗೆ ಆದೇಶ ಬಂದಿತ್ತು. ಜಿಲ್ಲಾ ಪಂಚಾಯಿತಿಯು ಸೋಮವಾರ ರಾತ್ರಿಯೇ ಬಾಲಕಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿತು. ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Comments are closed.