ಕರ್ನಾಟಕ

ಫೇಸ್‌ಬುಕ್‌ ಮೂಲಕ ಪರಿಚಯವಾದ ಯುವತಿಯಿಂದ 2.10 ಲಕ್ಷ ವಂಚನೆ

Pinterest LinkedIn Tumblr

facebookಬೆಂಗಳೂರು: ‘ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯೊಬ್ಬರು ₹2.10 ಲಕ್ಷ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಸಾಫ್ಟ್‌ವೇರ್‌್ ಎಂಜಿನಿಯರ್‌ ಗೋವಿಂದ್‌ ಶರ್ಮಾ ಎಂಬುವರು ಹುಳಿಮಾವು ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.

‘ಶರ್ಮಾ ನೀಡಿರುವ ದೂರಿನಡಿ ದುಬೈ ಮೂಲದ ಆಯಿಷಾ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ಅವರನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

‘ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಶರ್ಮಾ ಅವರಿಗೆ ಫೇಸ್‌ಬುಕ್‌ ಮೂಲಕ ಆಯಿಷಾ ಪರಿಚಯವಾಗಿದ್ದರು. ದುಬೈ ಬಿಟ್ಟು ನಗರಕ್ಕೆ ಬಂದು ನೆಲೆಸುವುದಾಗಿ ಹೇಳುತ್ತಿದ್ದರು.’

‘ಇತ್ತೀಚೆಗೆ ಭಾರತಕ್ಕೆ ಬರುತ್ತಿದ್ದೇನೆ ಎಂದು ಹೇಳಿದ್ದ ಯುವತಿ, ತಮ್ಮನ್ನು ದೆಹಲಿಯಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ₹2.10 ಲಕ್ಷ ದಂಡ ಪಾವತಿಸಿದರೆ ಬಿಡುವುದಾಗಿ ಹೇಳುತ್ತಿದ್ದಾರೆ ಎಂದು ಶರ್ಮಾಗೆ ಕರೆ ಮಾಡಿ ತಿಳಿಸಿದ್ದರು.’

‘ಅದನ್ನು ನಂಬಿದ್ದ ಶರ್ಮಾ, ಖಾತೆಗೆ ಹಣ ಹಾಕಿದ್ದರು.  ಕೆಲ ಸಮಯ ಬಳಿಕ ಕರೆ ಮಾಡಿದಾಗ ಯುವತಿ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು ಎಂದು ದೂರುದಾರರು ಹೇಳಿದ್ದಾರೆ’ ಎಂದು ವಿವರಿಸಿದರು.

Comments are closed.