ಕರ್ನಾಟಕ

ಪ್ರಗತಿ ಬ್ಯಾಂಕ್ ನಿಂದ ಮೊಬೈಲ್ ಎಟಿಎಂ

Pinterest LinkedIn Tumblr

mobile-atmಬೆಂಗಳೂರು(ನ.03): ಒಂದೆಡೆ ನೋಟ್ ಬ್ಯಾನ್’ನಿಂದಾಗಿ ಇಡಿ ದೇಶವೇ ಹಣದ ಬವಣೆಯಿಂದ ಬಳಲುತ್ತಿದ್ದರೆ, ಮತ್ತೊಂದೆಡೆ ಅವಶ್ಯಕ ಹೊಸ ನೋಟ್’ಗಳನ್ನು ಪೂರೈಸುವಲ್ಲಿ ರಾಷ್ಟ್ರೀಯ ಬ್ಯಾಂಕ್’ಗಳು ಹಾಗೂ ಎಟಿಎಂಗಳು ವಿಫಲವಾಗಿದೆ, ಆದರೆ ಯಾರಿಗೇನು ನಾವು ಕಡಿಮೆ ಇಲ್ಲ ಎನ್ನುವಂತೆ ಗ್ರಾಮೀಣ ಬ್ಯಾಂಕ್’ಗಳು ಮಾತ್ರ ಜನಸಾಮಾನ್ಯರಿಗೆ ಅನುಕೂಲವಾಗಲು ಮೊಬೈಲ್ ಎಟಿಎಂಗಳನ್ನು ತೆರೆದಿದೆ. ಈ ಮೊಬೈಲ್ ಎಟಿಎಂಗಳನ್ನು ಎಲ್ಲೆಲ್ಲಿ ಅಳವಡಿಸಲಾಗಿದೆ? ಇಲ್ಲಿದೆ ವಿವರ.
ಪ್ರಧಾನಿ ಮೋದಿ ಅವರ ಐತಿಹಾಸಿಕ ನಿರ್ಧಾರಕ್ಕೆ ಜನಸಾಮಾನ್ಯರು ಗಂಟೆಗಟ್ಟಲೇ ಬ್ಯಾಂಕ್ ಎದುರು ನಿಲ್ಲುವಂತಾಗಿದೆ. ಅಲ್ಲದೆ ಸರತಿಯಲ್ಲಿ ನಿಂತರೂ ಸಹ ಕೆಲವೊಮ್ಮೆ ಹಣ ಸಿಗುತ್ತಿಲ್ಲ. ಮತ್ತೆ ಕೆಲವೊಮ್ಮೆ 2000 ಹೊಸ ನೋಟ್ ಪಡೆದ ಗ್ರಾಹಕರು ಚಿಲ್ಲರೆಗಳಿಗಾಗಿ ಪರದಾಡುವಂತಾಗಿದೆ. ಇನ್ನು ಎಟಿಎಂಗಳ ವಿಚಾರಕ್ಕೆ ಬರುವುದಾದರೆ ಹಣವಿಲ್ಲದೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸದ್ಯ ಇದೆಲ್ಲವನ್ನು ಆಲಿಸಿರುವ ಬಳ್ಳಾರಿಯ ಪ್ರಗತಿ ಗ್ರಾಮೀಣ ಬ್ಯಾಂಕ್ ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಮೊಬೈಲ್ ಎಟಿಎಂಗಳ ಸೇವೆಯನ್ನು ಗ್ರಾಮೀಣ ಭಾಗಗಳಿಗೆ ಕಲ್ಪಿಸುತ್ತಿದೆ.
ಜನಸಾಮಾನ್ಯರ ಅನುಕೂಲಕ್ಕಾಗಿ ಮೊಬೈಲ್ ಎಟಿಎಂಗಳ ಸೌಲಭ್ಯ ಕಲ್ಪಿಸಿರುವ ಪ್ರಗತಿ ಬ್ಯಾಂಕ್, ತನ್ನ ಸೇವೆಯನ್ನು ಆಸ್ಪತ್ರೆ,ಮಾರುಕಟ್ಟೆ, ಬಸ್ ನಿಲ್ದಾಣಗಳಂತಾ ಸ್ಥಳಗಳಲ್ಲಿ ಪ್ರತಿ ಎರಡು ತಾಸು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎರಡು ತಾಸು ಸೇವೆಯನ್ನು ಒದಗಿಸುತ್ತಿದೆ. ಇದರಿಂದಾಗಿ ಹಣಪಡೆಯಲು ಬ್ಯಾಂಕ್ ಹಾಗೂ ಎಟಿಎಂ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತು ಸುಸ್ತಾಗಿದ್ದ ಜನಸಾಮಾನ್ಯರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ಒಟ್ನಲ್ಲಿ , ಕೆಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ಬೆಂಬಲ ನೀಡುತ್ತಿರುವ ಶ್ರೀಸಾಮಾನ್ಯರು, ತಮ್ಮ ಹಣವನ್ನು ಪಡೆಯಲು ಹರಸಾಹಸ ಪಟ್ರು ಸಹ ಹೊಸ ಆಯಾಮಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳತ್ತಿದ್ದು ಹೊಸ ಸೌಲಭ್ಯಗಳನ್ನು ಯಾವುದೇ ಗೋಜುಗಳಿಲ್ಲದೆ ಅನುಭವಿಸುತ್ತಿದಾನೆ .

Comments are closed.