ಕರ್ನಾಟಕ

ಆಸ್ಪತ್ರೆಯ ಚುಚ್ಚುಮದ್ದಿಗೆ ಒಂದೂವರೆ ತಿಂಗಳ ಮಗು ಬಲಿ

Pinterest LinkedIn Tumblr

injectionಚಾಮರಾಜನಗರ. ನ. ೨೮- ಜಿಲ್ಲಾಸ್ಪತ್ರೆಯಲ್ಲಿ ಒಂದೂವರೆ ತಿಂಗಳ ಹಸುಗೂಸಿಗೆ ನೀಡಿದ ಚುಚ್ಚುಮದ್ದಿನ ಪರಿಣಾಮ ಮುದ್ದು ಕಂದಮ್ಮ ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ತಡವಾಗಿ ವರದಿಯಾಗಿದೆ.
ತಾಲ್ಲೂಕಿನ ಹೆಬ್ಬಸೂರು ಗ್ರಾಮದ ಮಹೇಶ್ ಮತ್ತು ಮಮತಾರವರಿಗೆ ಜನಿಸಿದ ಮಗುವಿಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮಗುವಿನ ಜನನ ಬಳಿಕ ನೀಡುವ ಚುಚ್ಚುಮದ್ದುನಿಂದ ರಕ್ತ ಸಾವ್ರ ಅಧಿಕವಾಗಿ ಕೊನೆಯುಸಿರು ಎಳೆದ ಘಟನೆ ನಡೆದಿದೆ.
ನ.21 ರಂದು ಮಗುವಿನೊಂದಿಗೆ ಹೆಬ್ಬಸೂರಿನಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಬಂದ ಮಮತಾ ಮತ್ತು ಮಹೇಶ್‍ರವರು ಮಗುವಿಗೆ ಚುಚ್ಚು ಮದ್ದು ಕೊಡಿಸಿದ್ದಾರೆ. ಆಗ ಮಗುವಿನ ಚುಚ್ಚು ಮದ್ದು ನೀಡಿದ ಸ್ಥಳದಲ್ಲಿ ರಕ್ತಸ್ರಾವವಾಯಿತು. ಇದನ್ನು ಕಂಡ ಪೋಷಕರು ವಿಚಾರಿಸಿದಾಗ ಮಗುವಿಗೆ ಚುಚ್ಚು ಮದ್ದು ನೀಡಿದ ವೇಳೆ ರಕ್ತಸ್ರಾವವಾಗುತ್ತೆ ತಣ್ಣಿರಿನ ಬಟ್ಟೆ ಕಟ್ಟುತ್ತೇವೆ ರಕ್ತ ನಿಲ್ಲುತ್ತದೆ ಎಂದು ಬಟ್ಟೆ ಕಟ್ಟಿ ಕಳುಹಿಸಿದರು.
ಆದರೂ ಕೂಡ ಮಗುವಿಗೆ ರಕ್ತಸ್ರಾವ ನಿಲ್ಲಲಿಲ್ಲ. ಇದರಿಂದ ಗಾಬರಿಯಾದ ಹೆತ್ತವರು, ಸಮೀಪದ ಆಲೂರು ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದ ಬಳಿಕ ನಂತರ ಜಿಲ್ಲಾಸ್ಪತ್ರೆಗೆ ದೌಡಾಯಿಸಿದರು. ಆಗ ಅಲ್ಲಿನ ವೈದ್ಯರು ಮಗುವಿನ ಪರಿಸ್ಥಿಯನ್ನು ಕಂಡು, ಕೂಡಲೇ ಮೈಸೂರಿನ ಕೆ.ಆರ್.ಆಸ್ಪತ್ರೆಯ ಚೆಲುವಾಂಬ ಆಸ್ಪತ್ರೆಗೆ ಕಳುಹಿಸಿ ಕೈ ತೊಳೆದುಕೊಂಡರು.
ಮೈಸೂರಿನ ಕೆ.ಆರ್. ಆಸ್ಪತ್ರೆಯ ಚೆಲುವಾಂಬ ಆಸ್ಪತ್ರೆಯಲ್ಲಿ ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಒಂದೂವರೆ ತಿಂಗಳ ಹಸಗೂಸು ಸಾವನ್ನಪ್ಪಿದೆ. ಆದರೆ ಅಲ್ಲಿನ ವೈದ್ಯರು ಮಗುವಿಗೆ ಚಿಕಿತ್ಸೆ ನೀಡಿದ ವಿವರಗಳನ್ನು ಪೋಷಕರಿಗೆ ನೀಡದೇ ಇರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್.ಜೈನ್‍ರವರಿಗೆ ದೂರು ನೀಡಿ, ಮಗುವಿನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ, ತಪ್ಪಿತಸ್ಥ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.
ಈ ನಡುವೆ ಚಾಮರಾಜನಗರ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ರಘುರಾಮ್ ಪ್ರಕರಣಕ್ಕೆ ಸಂಭಂಧಿಸಿದಂತೆ ತನಿಖೆ ನಡೆಸಲು ಸಮತಿಯೊಂದನ್ನು ರಚಿಸಿ ತಪ್ಪಿತಸ್ಥರನ್ನು ಕಾನೂನಿನ ಪ್ರಕಾರ ಕ್ರಮವಹಿಸುವುದಾಗಿ ಪೋಷಕರಿಗೆ ಬರವಸೆ ನೀಡಿದ್ದಾರೆ. ಅಂತೂ ಆಸ್ಪತ್ರೆಯಲ್ಲಿ ನೀಡುವ ಚುಚ್ಚುಮದ್ದಿನಿಂದ ಮುದ್ದು ಕಂದಮ್ಮ ಬಾರದಲೋಕಕ್ಕೆ ಹೋಗಿದ್ದು ಮಾತ್ರ ಸತ್ಯ.

Comments are closed.