ಕರ್ನಾಟಕ

ಅತ್ತೆಯ ಕತ್ತು ಹಿಸುಕಿ ಕೊಂದ ಅಳಿಯ

Pinterest LinkedIn Tumblr

murder-hyderabadಕೆ.ಆರ್.ಪುರಂ, ನ. ೨೮- ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಳಿಯನೇ ಅತ್ತೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಕಿತ್ತಗನೂರು ಇಂದು ಬೆಳಿಗ್ಗೆ ನಡೆದಿದೆ.
ಮುನಿರತ್ನಮ್ಮ (50) ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದಾರೆ. ಅಳಿಯ ವೀರಪ್ಪ ಎರಡು ತಿಂಗಳ ಹಿಂದೆ ಮುನಿರತ್ನಮ್ಮರವರ ಮಗಳಾದ ಸೌಮ್ಯರವರನ್ನು ಪ್ರೀತಿಸಿ ಮದುವೆಯಾಗಿದ್ದರು.
ಅತ್ತೆ ಮನೆಯಲ್ಲಿ ವಾಸವಿದ್ದ ವೀರಪ್ಪ ಪದೇ ಪದೇ ಅತ್ತೆ ಮತ್ತು ಹೆಂಡತಿಯೊಂದಿಗೆ ಜಗಳ ಮಾಡಿಕೊಳ್ಳುತ್ತಿದ್ದ. ನಿನ್ನೆ ರಾತ್ರಿ ಸಹ ಜಗಳವಾಡಿಕೊಂಡಿದ್ದಾರೆ. ಇದನ್ನು ಬಿಡಿಸಿದ ಸ್ಥಳೀಯರು ಬುದ್ದಿವಾದ ಹೇಳಿ ಕಳುಹಿಸಿದ್ದಾರೆ. ನಂತರ ತಡರಾತ್ರಿ ಬಂದ ವೀರಪ್ಪ, ಚಿಮಣಿಯಿಂದ ಒಳಬಂದು ಅತ್ತೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಗಲಾಟೆಯ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಸ್ಥಳೀಯರು ವೀರಪ್ಪನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ತಮಿಳುನಾಡು ಧರ್ಮಪುರಿ ಮೂಲದ ವೀರಪ್ಪ, ಕೆ.ಆರ್. ಇನ್ ಹೋಟೆಲ್‌ನಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದ. ಹಣದಾಸೆಗಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಆವಲಹಳ್ಳಿ ಪೊಲೀಸರು, ಆರೋಪಿಯನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Comments are closed.