ಮನೋರಂಜನೆ

ರವಿಚಂದ್ರನ್ ಮತ್ತು ಖುಷ್ಬೂ ಅಭಿನಯದ ಅಂಜದ ಗಂಡು 28 ವರ್ಷಗಳ ನಂತರ ಮತ್ತೊಮ್ಮೆ ಬಿಡುಗಡೆ

Pinterest LinkedIn Tumblr

anjada-ganduಬೆಂಗಳೂರು: 80ರ ದಶಕದಲ್ಲಿ ರವಿಚಂದ್ರನ್ ಮತ್ತು ಖುಷ್ಬೂ ಅಭಿನಯದ ‘ಅಂಜದ ಗಂಡು’ ಸಿನಿಮಾ ಡಿಸೆಂಬರ್ 2 ರಂದು ಮತ್ತೆ ಬಿಡುಗಡೆಯಾಗಲಿದೆ.
ಇದೀಗ ರವಿಚಂದ್ರನ್ ಮತ್ತು ಖುಷ್ಬೂ ಅಭಿನಯದ ‘ಅಂಜದ ಗಂಡು’ ಸಿನಿಮಾವನ್ನು ಹೊಸ ತಂತ್ರಜ್ಞಾನದಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕ ಬಿ.ಎನ್. ಗಂಗಾಧರ್ ಸಜ್ಜಾಗಿದ್ದಾರೆ. ಈ ಚಿತ್ರ 1988ರಲ್ಲಿ ಬಿಡುಗಡೆಯಾಗಿತ್ತು. ಈಗ 28 ವರ್ಷಗಳ ನಂತರ ಮತ್ತೆ ಬಿಡುಗಡೆಯಾಗುತ್ತಿದೆ.
ಆ ಚಿತ್ರದಲ್ಲಿ `ಪ್ರೀತಿಯಲ್ಲಿ ಇರೋ ಸುಖ’, `ಏಕೆ ಹೀಗಾಯ್ತೋ ನಾನು ಕಾಣೇನು’, `ನೀಲಿ ಬಾನಲಿ ತೇಲಿ ಹೋದೆನು’, `ಮೂರು ಕಾಸಿನ ಕುದುರೆ’ ಮುಂತಾದ ಹಾಡುಗಳು ಇಂದಿಗೂ ಜನಪ್ರಿಯ. ಹಂಸಲೇಖ ಅವರು ಸಂಗೀತ ನೀಡಿದ್ದ ಈ ಚಿತ್ರ ಮತ್ತೊಮ್ಮೆ ಪ್ರೇಕ್ಷಕರನ್ನು ಖುಷಿಪಡಿಸುವುದಕ್ಕೆ ಮತ್ತೆ ರಿಲೀಸ್ ಆಗುತ್ತಿದೆ.

Comments are closed.