ಕರ್ನಾಟಕ

ಚಾಮುಂಡಿ ಬೆಟ್ಟದ ಹುಂಡಿಯಲ್ಲಿ 500, 1000 ರೂ. ನೋಟ್‍ಗಳೆಷ್ಟು ಗೊತ್ತಾ?

Pinterest LinkedIn Tumblr

500ಮೈಸೂರು: ಕೇಂದ್ರ ಸರ್ಕಾರ 500 ಹಾಗೂ 1 ಸಾವಿರ ರೂ ನೋಟ್‍ಗಳ ಮೇಲೆ ನಿಷೇಧ ಹೇರಿದ ಬಳಿಕ ಬ್ಯಾನ್ ಆದ ನೋಟ್‍ಗಳನ್ನು ಜನರು ದೇವರ ಹುಂಡಿಗೆ ಹಾಕ್ತಿದ್ದಾರೆ ಅನ್ನೋ ಮಾತು ಎಲ್ಲೆಡೆ ಕೇಳಿಬರ್ತಿದೆ. ಆದರೆ ಈ ಮಾತು ಸಂಪೂರ್ಣ ಸತ್ಯವಲ್ಲ. ಏಕೆಂದರೆ ಸಾಮಾನ್ಯವಾಗಿ ಮೈಸೂರಿನ ಚಾಮುಂಡಿ ಬೆಟ್ಟದ ದೇವಸ್ಥಾನದ ಹುಂಡಿಯಲ್ಲಿ ಸಿಗುತ್ತಿದ್ದ 500 ಹಾಗೂ 1 ಸಾವಿರ ರೂ. ನೋಟ್ ಸಂಖ್ಯೆಯಲ್ಲಿ ಈಗ ಭಾರೀ ಇಳಿಮುಖವಾಗಿದೆ.

ನೋಟ್ ಬ್ಯಾನ್ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ, ಅರಮನೆ ದೇವಾಲಯ ಹಾಗೂ ಉತ್ತನಹಳ್ಳಿ ದೇವಾಲಯದ ಹುಂಡಿ ತೆರೆಯಲಾಗಿದೆ. ಎಲ್ಲಾ ಕಡೆಯಿಂದ ಒಟ್ಟು 2.5 ಕೋಟಿ ರೂ. ಹಣ ಸಂಗ್ರಹವಾಗಿದೆ. ಆದರೆ ವಾಡಿಕೆಗಿಂತ ಕಡಿಮೆ ಸಂಖ್ಯೆಯಲ್ಲಿ 500 ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳು ಸಿಕ್ಕಿವೆ. ಈ ಹಿಂದೆ ಹುಂಡಿ ತೆರೆದಾಗ 32 ಲಕ್ಷ ರೂ. ಮೊತ್ತದ 500 ಮತ್ತು 1 ಸಾವಿರ ನೋಟುಗಳು ಸಿಕ್ಕಿದ್ವು. ಈಗ ಎರಡು ತಿಂಗಳ ಅವಧಿಯಲ್ಲಿ ಸಂಗ್ರಹವಾದ ಹುಂಡಿ ಹಣದಲ್ಲಿ 22 ಲಕ್ಷ ರೂ. ಮೊತ್ತದ 500 ಮತ್ತು 1 ಸಾವಿರ ರೂ. ನೋಟುಗಳು ಸಿಕ್ಕಿವೆ.

ಒಂದು ಕೋಟಿ ರೂ. ಹಣದಲ್ಲಿ ಶೇಕಡಾ 40 ರಷ್ಟು ನೋಟುಗಳು ದೊಡ್ಡ ಮೊತ್ತದ್ದಾಗಿರುತ್ತಿತ್ತು. ಆದರೆ, ಈಗ 2.5 ಕೋಟಿ ರೂ. ಹಣದಲ್ಲಿ ದೊಡ್ಡ ಮೊತ್ತದ ನೋಟು ಕಡಿಮೆ ಇವೆ. ಡಿಸೆಂಬರ್ ಅಂತ್ಯದ ವೇಳೆಗೆ ಈ ಹುಂಡಿಯನ್ನು ಮತ್ತೆ ತೆರೆಯಲು ಮುಜರಾಯಿ ಇಲಾಖೆ ನಿರ್ಧರಿಸಿದೆ.

Comments are closed.