ಮಂಗಳೂರು: ಎಷ್ಟೋ ಮಂದಿ ನಿದ್ದೆ ಬರ್ತಿಲ್ಲಾ ನಂಗೆ ನಿದ್ದೆ ಬರ್ತಿಲ್ಲ ಅಂತ ರಾತ್ರಿಯೆಲ್ಲಾ ಒದ್ದಾಡ್ತಿರ್ತಾರೆ. ಎಷ್ಟೇ ಒದ್ದಾಡಿದೂ ನಿದ್ರಾದೇವಿ ಮಾತ್ರ ಅವರ ಮೈಮೈಲೆ ಅವಾಹನೆಯಾಗಲ್ಲ. ಒಳ್ಲೆ ನಿದ್ದೆ ಬರಬೇಕಂದರೆ ಏನ್ ಮಾಡಬೇಕು ಎಂದು ನಾವು ಹೇಳುತ್ತೇವೆ. ಅದರೆ ನಾವು ಹೇಳುವ ಎಲ್ಲಾ ಮಾಹಿತಿಗಳು ನಿಮಗೆ ಅನ್ವಯಿಸುತ್ತೆ ಅಂತ ನಾವು ಹೇಳ್ತಿಲ್ಲ … ಅದರೆ ಇವೆಲ್ಲ ಒಳ್ಳೇ ಅಭ್ಯಾಸಗಳು , ಇವುಗಳಲ್ಲಿ ನಿಮಗೆ ಯಾವುದು ಸರಿ ಅನ್ನಿಸುತ್ತೋ, ಅದನ್ನು ನೀವು ಜೀವನದಲ್ಲಿ ಅಳವಡಿಸಿ ಸುಖ ನಿದ್ರೆಯನ್ನು ಅನಂದಿಸಿ…
1. ಮಲಗೋ ಮುಂಚೆ ಬಿಸಿನೀರಲ್ಲಿ ಸ್ನಾನ ಮಾಡಿ.
2. ರಾತ್ರಿ ಅಲ್ಕೋಹಾಲ್ ಕುಡಿಯಬೇಡಿ
3. ಮಲಗೋ ರೂಮಲ್ಲಿ ಚೆನ್ನಾಗಿ ಗಾಳಿ ಓಡಾಡ್ತಿತಿರಲಿ, ಸಲ್ಪ ತಣ್ಣಗಿರಲಿ
4. ಮಧ್ಯಾಹ್ನ 20 ನಿಮಿಷಕ್ಕಿಂತ ಜಾಸ್ತಿ ನಿದ್ದೆ ಹೊಡೀಬೇಡಿ.
5. ದಿನಾ ಒಂದೇ ಹೊತ್ತಿಗೆ ಮಲ್ಕೋಳಿ ಮತ್ತು ಒಂದೇ ಹೊತ್ತಿಗೆ ಎದ್ದೇಳಿ.
6.ಮಧ್ಯಾಹ್ನದ ನಂತರ ಕಾಫಿ , ಟೀ ಕುಡಿಬೇಡಿ
7. ಬೆಡ್ ರೂಮ್‌ನಲ್ಲಿ ಟಿವಿ ಇಟ್ಟುಕೊಳ್ಳಬೇಡಿ, ಒಂದು ವೇಳೆ ಇದ್ದರೂ ಮಲಗುಕ್ಕೂ ಒಂದು ಗಂಟೆ ಮುಂಚೆನೇ ಟಿವಿ ಆಫ್ ಮಾಡಿ.
8.ಬೆಡ್ ರೂಮ್‌ನಲ್ಲಿ ಕಣ್ಣು ಕೊಕ್ಕೋ ಬೆಳಕು ಇರದಂತೆ ನೋಡ್ಕೊಳಿ ಉದಾಹರಣೆ LED ಲೈಟ್ಸ್ ಎನಾದ್ರೂ ಇದ್ರೆ ಮೊದಲು ಅಫ್ ಮಾಡಿ ಬಿಡಿ
9. ಬೆಡ್ ರೂಮ್‌ನಲ್ಲಿ ಹಾಸಿಗೇನ ಮಲಗಕ್ಕೆ (ಮದುವೆಯಾಗಿದ್ದರೆ *ಅದಕ್ಕೆ*) ಬಿಟ್ಟು ಇನ್ಯಾವುದಕ್ಕೂ ಬಳಸ್ಬೇಡಿ
10 ಬೆಕ್ಕು, ನಾಯಿ ಇದ್ದರೆ ಬೆಡ್ ರೂಮ್‌ನ ಹಾಸಿಗೆಯ ಮೇಲೆ ಬಎಅಕ್ಕೆ ಬಿಡಬೇಡಿ ಅವುಗಳನ್ನು ಬೇರೆಯೇ ಮಲಗಿಸಿ.
11 ಮಲಗಕ್ಕೆ 3 ಗಂಟೆ ಮುಂಚೆ ಮನೆಯಲ್ಲಿ ಬೆಳಕು ಕಡಿಮೆ ಇರೋಹಂಗೆ ನೋಡ್ಕೋಳಿ.
12. ಹಾಸಿಗೆ ಮೇಳೆ ೧೫ ನಿಮಿಷ ಆದರೂ ನಿದ್ದೆ ಬರ್ಲಿಲ್ಲಾ ಅಂದ್ರೆ ಎದ್ದು ಏನಾದ್ರೂ ಓದಿ ,ಆದರೆ ರಾತ್ರಿ ಹೊತ್ತು ಓದಬೇಕಾದರೆ ಬೆಳಕು ಕಡಿಮೆ ಇರಲಿ
13. ಪತ್ರಿದಿನ ವ್ಯಾಯಾಮ ಮಾಡಿ , ಅದ್ರೆ ತೀರಾ ಮಲಗೋ ಟೈಮಲ್ಲಿ ಮಾಡಕ್ಕೆ ಹೋಗ್ಬೇಡಿ.
14. ನಿದ್ದೆಗೂ 2-3 ಗಂಟೆ ಮುನ್ನ ಬೀನ್ಸ್, ಕಡಲೆಬೀಜ, ಮೊಸರು… ಅದರೆ ಹೆಚ್ಚಾಗಿ ಅಮೈನೋ ಆಸಿಡ್ ಇರೋ ಪದಾರ್ಥ ತಿನ್ನಿ.
15. ತಡರಾತ್ರಿ ಹೊಟ್ಟೆ ಬಿರಿಯೋ ಹಂಗೆ ಇನ್ನಕ್ಕೆ ಹೋಗ್ಬೇಡಿ.
16. ನಿದ್ದೆ ಮಾಡಲು ತೀರ ಕಷ್ಟ ಅನಿಸಿದರೆ. ಮದುರವಾದ ಸಂಗೀತ ಹಾಕಿ ಮಲಗಿ ಇದರಿಂದ ನಿದ್ದೆ ಚೆನ್ನಾಗಿ ಬರತ್ತೆ.
Comments are closed.