ಕರ್ನಾಟಕ

ಹಳೆ 500,1000 ನೋಟುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವ್ಯಂಗ್ಯ, ಅವಮಾನ..!

Pinterest LinkedIn Tumblr

ವಿಶೇಶ ವರದಿ: ಭ್ರಷ್ಟಾಚಾರ, ಕಪ್ಪುಹಣ ಹಾಗೂ ನಕಲಿ ನೋಟುಗಳಿಗೆ ತಿಲಾಂಜಲಿ ನೀಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ಮಧ್ಯರಾತ್ರಿಯಿಂದಲೇ 500 ಮತ್ತು 1,000 ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ನಾಳಿನ (ನ.10) ಗುರುವಾರ 500 ಮತ್ತು 2,000 ಮುಖಬೆಲೆಯ ಹೊಸ ನೋಟುಗಳು ಬಿಡುಗಡೆಯಾಗಲಿದೆ.

ಈತನ್ಮಧ್ಯೆ ಸಾಮಾಜಿಕ ಜಾಲತಾಣಗಳದ ವಾಟ್ಸಾಪ್ ಹಾಗೂ ಫೇಸ್ ಬುಕ್ ಮೊದಲಾದವುಗಳಲ್ಲಿ ಹಳೆಯ 500 ಹಾಗೂ 1000 ಮುಖಬೆಲೆಯ ನೋಟುಗಳಿಗೆ ವ್ಯಂಗ್ಯವಾಡುವ ಬರಹಗಳು, ಫೋಟೋಗಳು ಹರಿದಾಡುತ್ತಿದ್ದು ಹಳೆಯ ನೋಟುಗಳನ್ನು ಜನರು ಲೆಕ್ಕಕ್ಕಿಲ್ಲದ ರೀತಿಯಲ್ಲಿ ಬಿಂಬಿಸುತ್ತಿರುವುದು ಹಾಗೂ ಹಾಸ್ಯಾಸ್ಪದವಾಗಿರುವುದು ಕಂಡುಬರುತ್ತಿದೆ.

indian_500-1000_notes-6 indian_500-1000_notes-1 indian_500-1000_notes-7 indian_500-1000_notes-5 indian_500-1000_notes-2 indian_500-1000_notes-3 indian_500-1000_notes-4

ಹಾಸ್ಯಾಸ್ಪದ ಫೋಟೋಗಳೇನು…?
500 ಹಾಗೂ 1000 ಮುಖಬೆಲೆಯ ನೋಟುಗಳಿಗೆ ಶ್ರದ್ಧಾಂಜಲಿ, ರಿಪ್ ಪೋಟ್, ನೋಟುಗಳಿಗೆ ದೀಪ ಹಚ್ಚಿರುವುದು, ನೋಟುಗಳನ್ನು ಕುರುಕಲು ತಿಂಡಿ ಕಟ್ಟುವುದು, ಶೆಂಗಾ ಕಟ್ಟಲು ಉಪಯೋಗಿಸಿದಂತೆ, ಮ್ಏಕೆಗೆ ಹುಲ್ಲಿನ ಬದಲು ನೋಟು ನೀಡುವ ಹಾಗಿನ ಚಿತ್ರ, ಟಾಯ್ಲೆಟ್ ಹಾಗೂ ವಶಿಂಗ್ ರೂಂನಲ್ಲಿ ಟಿಸ್ಯೂ ಬಳಸಿದಂತೆ ಹಳೆಯ ನೋಟುಗಳನ್ನು ಚಿತ್ರಿಸಲಾಗಿದೆ.

ಹಾಸ್ಯ ಸಂದೇಶಗಳು….
* ಇದೆಲ್ಲದರ ಮಧ್ಯೆ ನನ್ನನ್ನು ಕಾಡುತ್ತಿರುವ ಪ್ರಶ್ನೆ ಬಿಗ್ ಬಾಸ್ ಮನೆಯಲ್ಲಿ ಇರೋರು ಆಚೆ ಬರೋದೆ 70 ದಿನ ಆದಮೇಲೆ ಪಾಪ ಅವರ ಹತ್ರ ಇರೋ 500, 1000 ನೋಟಿನ ಕಥೆ ???
* ಪ್ರತಿಯೊಬ್ಬರೂ ತಮ್ಮ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್ಸು ನಾಲ್ಕಾಣೆಯನ್ನು ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿತ್ತು.
???
* ಇಷ್ಟು ದಿನ JIO ಸಿಮ್ಗೆ ಕ್ಯೂ ನಿಂತಿದಲ್ಲ????
ನಾಳೆಯಿಂದ ₹500/1000 ನೋಟ್ Exchangeಗೆ ಕ್ಯೂ ನಿಲ್ಲಬೇಕು….??????
*ಕೆಲವರು ನಿನ್ನೆ ಸಾಯಂಕಾಲದಿಂದ ಅನ್ಲೈನ್ ಇಲ್ಲ, ಇನ್ನೂ ಎಣಿಸಿ ಮುಗಿದಿಲ್ವಾ.? ? ? ? ?
*ಲಕ್ಷ್ಮಿ ಬಾರಮ್ಮ…..
ಭಾಗ್ಯದ ನೂರ್ ನೂರ್ ರೂಪಾಯಿ
ಲಕ್ಷ್ಮೀ ಬಾರಮ್ಮ…..
ನಮ್ಮಮ್ಮ ನೀ ಸೌಭಾಗ್ಯದ ನೂರ್ ನೂರ್ ರೂಪಾಯಿ…. 😉

ಹೀಗೆ ಹತ್ತು ಹಲವು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಇಂದು ಬರುತ್ತಿದ್ದರೂ ಕೂಡ ಹಿಂದಿನ ನೋಟಿನ ಬೆಲೆ ನಿಜಕ್ಕೂ ಬಡವ ಮತ್ತು ಜನಸಾಮನ್ಯನಿಗೆ ಮಾತ್ರ ಗೊತ್ತಿದೆ.

(ಫೋಟೋ ಮತ್ತು ಸಂದೇಶ- ಸಾಮಾಜಿಕ ಜಾಲತಾಣ)

Comments are closed.