ಕರ್ನಾಟಕ

ಯುವಕ, ಯುವತಿಯರನ್ನು ಹೆಚ್ಚು ತನ್ನತ್ತ ಆಕರ್ಷಿಸುವ ಉದ್ಯೋಗಗಳು ಯಾವುದು ಗೋತ್ತೆ.?

Pinterest LinkedIn Tumblr

actrative_job_life

ಮಂಗಳೂರು: ಇತ್ತಿಚೀನ ದಿನಗಳಲ್ಲಿ ಯುವಕ, ಯುವತಿಯರು ಮನದಲ್ಲಿ ಎಲ್ಲರು ತಮ್ಮತ್ತ ಆಕರ್ಷಕರಾಗಬೇಕು, ನಾಲ್ಕು ಜನರ ಮುಂದೆ ನಾವೇ ಎದ್ದು ಕಾಣಬೇಕು ಎಂಬೆಲ್ಲ ಕನಸುಗಳನ್ನು ಕಾಣುತ್ತಾರೆ.

ಉದಾಹರಣೆಗೆ : ಸಾಮಾನ್ಯವಾಗಿ ವ್ಯಕ್ತಿಯ ಉದ್ಯೋಗವನ್ನು ನೋಡಿ ಆತನ ವ್ಯಕ್ತಿತ್ವವನ್ನು ಗುರುತಿಸಲಾಗುತ್ತದೆ. ಆದರೆ ಕೆಲವೊಂದು ಆಕರ್ಷಕ ಉದ್ಯೋಗಗಳು ಕೂಡ ಯುವತಿಯರನ್ನು ನಿಮ್ಮತ್ತ ಆಕರ್ಷಿಸಬಲ್ಲದು. ಬಿಳಿ ಸಮವಸ್ತ್ರದಲ್ಲಿ ವಿಮಾನದಿಂದ ಇಳಿಯುವ ಪೈಲಟ್ನನ್ನು ಯುವತಿಯರು ಬೇಡ ಎನ್ನುವರೆ? ಆದರೆ ಈ ಕೆಳಗಿನ ಉದ್ಯೋಗಗಳು ನಿಮಗೆ ಇಷ್ಟವಾದಲ್ಲಿ ಅತ್ತ ಕಣ್ಣು ಹಾಯಿಸಿ ಆಕರ್ಷಕ ವ್ಯಕ್ತಿತ್ವ ಹೊಂದಿದವರೆಂದು ಗುರುತಿಸಿಕೊಳ್ಳುವುದೂ ಈ ಮೂಲಕ ಸಾಧ್ಯವಿದೆ.

ಆಕರ್ಷಕ ವ್ಯಕ್ತಿತ್ವಗಳು :

photography_pic_

1. ಫೋಟೋಗ್ರಾಫರ್ : ಇದು ಮಹಿಳೆಯರನ್ನು ಹೆಚ್ಚು ಆಕರ್ಷಿಸುವ ವೃತ್ತಿ ಇದು.ಯಾವಾಗಲೂ ತನ್ನ ಸುಂದರ ಚಿತ್ರಗಳನ್ನು ತೆಗೆಯುವ ವ್ಯಕ್ತಿಯನ್ನು ಯಾವ ಮಹಿಳೆ ತಾನೇ ಇಷ್ಟಪಡುವುದಿಲ್ಲ. ಎಲ್ಲದರಲ್ಲೂ ಸೌಂದರ್ಯ ಕಾಣುವ ವ್ಯಕ್ತಿ ಯಾರಿಗೆ ಬೇಡ. ಜೊತೆಗೆ ಇರುವ ಫೋಟೋಗ್ರಾಫರ್ ಬಾಯ್ಫ್ರೆಂಡ್ ಅತ್ಯುತ್ತಮ ಆಸ್ತಿ!

cook

2. ಅಡುಗೆಯಾತ : ಪ್ರತೀ ಮಹಿಳೆಯೂ ಅಡುಗೆ ಮಾಡುವ ಪುರುಷನನ್ನು ಇಷ್ಟಪಡುತ್ತಾಳೆ. ಮಹಿಳೆಯ ಹೃದಯಕ್ಕೆ ಲಗ್ಗೆ ಹಾಕಬೇಕೆಂದರೆ ಆಕೆಯ ಹೊಟ್ಟೆಯ ಮೂಲಕ ದಾರಿ ಮಾಡಿಕೊಳ್ಳಬಹುದು. ಅಡುಗೆ ಮನೆಯಲ್ಲಿ ರುಚಿಕರ ತಿನಿಸು ಮಾಡಿಕೊಡುವ ಬಾಯ್ಫ್ರೆಂಡ್ ಯಾರಿಗೆ ಬೇಡ.

3. ಸೇನಾಧಿಕಾರಿ: ಶಿಸ್ತಿನ ಅಧಿಕಾರಿ ಗಡಿಯಾಚೆಗಿನ ವ್ಯಕ್ತಿಗಳನ್ನು ತರಬೇತಿ ನೀಡುವುದು ಮಾತ್ರವಲ್ಲ, ಮಹಿಳೆಯರು ಅಲಕ್ಷಿಸಲಾಗದೇ ಇರುವ ಕಟ್ಟುಮಸ್ತಾದ ದೇಹವನ್ನು ಹೊಂದಿರುತ್ತಾರೆ. ಉತ್ತಮ ವ್ಯಕ್ತಿತ್ವ ಮತ್ತು ನಡವಳಿಕೆ ಜೊತೆಗೂಡಿದಲ್ಲಿ ಆಕರ್ಷಕ ವ್ಯಕ್ತಿತ್ವ ಪಡೆಯಲು ಅತ್ಯುತ್ತಮ ಸಂಯೋಜನೆಯಾಗಲಿದೆ.

Pilots sitting in an airplane cabin flying and smiling

4. ಪೈಲಟ್ :ಸೇನಾಧಿಕಾರಿಯಂತೆಯೇ ಪೈಲಟ್ಗಳೂ ಒಂದು ರೀತಿಯ ಅಧಿಕಾರೀ ನಿಲುವನ್ನು ಹೊಂದಿರುತ್ತಾರೆ. ದೊಡ್ಡ ಜವಾಬ್ದಾರಿ ಇರುವ ಹುದ್ದೆ ಇದು. ಹೀಗಾಗಿ ಉದ್ಯೋಗವೇ ಅವರ ಜೀವನಶೈಲಿಯಾಗಿರುತ್ತದೆ. ಪೈಲಟ್ ಸ್ನೇಹಿತರನ್ನು ವಿಭಿನ್ನ ಸ್ಥಳಗಳಿಗೂ ಕೊಂಡೊಯ್ಯಬಹುದು. ಉತ್ತಮ ಉಡುಗೆ ತೊಟ್ಟ, ಸಾಕಷ್ಟು ಪ್ರಯಾಣದ ಅನುಭವವಿರುವ, ಓದು ಇರುವ ಮತ್ತು ಸುಂದರ ವ್ಯಕ್ತಿ ಎಲ್ಲರನ್ನೂ ಆಕರ್ಷಿಸುತ್ತಾರೆ. ಹೀಗಾಗಿ ಮಹಿಳೆಯರು ಬೀಳುವುದು ವಿಶೇಷವೇನೂ ಅಲ್ಲ.

Doctor-medical-health

5. ವೈದ್ಯರು: ಪ್ರೀತಿ ಅರಳಲು ವೈದ್ಯಕೀಯ ಕ್ಷೇತ್ರ ಬಹಳ ಉತ್ತಮ ಜಾಗ. ಪ್ರತೀ ನಾಗರಿಕನ ಜೀವ ಉಳಿಸುವ ಹೊಣೆಗಾರಿಕೆ ಅವರದ್ದು. ಹೀಗಾಗಿ ಬುದ್ಧಿವಂತ, ಶಿಸ್ತಿನ ಮತ್ತು ಸದಾ ನೆರವಿಗೆ ಬರುವ ವ್ಯಕ್ತಿತ್ವ ಎಲ್ಲರನ್ನೂ ಆಕರ್ಷಿಸಲಿದೆ.

job

6. ಉದ್ಯಮಿ: ಮೆದುಳೇ ಆಕರ್ಷಣೆಯ ಕೇಂದ್ರ. ಉದ್ಯಮಿಗಳು ಬಹಳ ಬುದ್ಧಿವಂತರಾಗಿರುತ್ತಾರೆ. ಹೀಗಾಗಿ ಉದ್ಯಮಿಯನ್ನು ಆರಿಸುವುದು ಇಂದಿನ ಅತೀ ದೊಡ್ಡ ಟ್ರೆಂಡ್. ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಸಾಧನೆ ಮಾಡಿದ್ದರೆ ಯುವತಿಯರು ಅವರ ಸುತ್ತ ತಿರುಗುತ್ತಿರುತ್ತಾರೆ. ಸ್ವಯಂ ಮುಂದೆ ಬಂದ, ನೇತೃತ್ವ ವಹಿಸುವಾತನನ್ನು ಎಲ್ಲರೂ ಮೆಚ್ಚುತ್ತಾರೆ.

singer

7. ಸಂಗೀತಗಾರ: ಸಂಗೀತಗಾರರು ಯಾವಾಗಲೂ ಅದೃಷ್ಟವಂತರು. ತಮ್ಮ ಸಂಗೀತ ಮತ್ತು ಕಲೆಯ ಮೂಲಕವೇ ಎಲ್ಲರನ್ನೂ ಆಕರ್ಷಿಸುತ್ತಾರೆ. ಅವರ ಸ್ವಲ್ಪ ಸಂವೇದನಾಶೀಲ, ಆಫ್ಬೀಟ್ ವ್ಯಕ್ತಿತ್ವವೂ ಎಲ್ಲರಿಗೂ ಮೆಚ್ಚುಗೆಯಾಗುತ್ತದೆ. ಅದರ ಜೊತೆಗೆ ಸಂಗೀತ ಹೃದಯಗಳನ್ನು ಬೆಸೆಯುವ ಮಾಧ್ಯಮವೆಂದರೂ ಸರಿ.

soft-final

8. ಕೋಡರ್ಗಳು/ ಸಾಫ್ಟ್ವೇರ್ ಇಂಜಿನಿಯರ್ಗಳು: ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಇಂಜಿನಿಯರ್, ಕೋಡರ್ಗಳ ಅಗತ್ಯ ನಿತ್ಯವೂ ಇರುತ್ತದೆ. ಹೀಗಾಗಿ ಇದು ಬಹಳ ಆಕರ್ಷಕ ಉದ್ಯೋಗವಾಗಿದೆ.

writier_script_1

9. ಲೇಖಕ: ಲೇಖಕನ ಪ್ರೀತಿ ಸಿಕ್ಕಲ್ಲಿ ಜೀವನವಿಡೀ ಖುಷಿಯಾಗಿರಬಹುದು ಎನ್ನುತ್ತಾರೆ. ಇದು ನಿಜವೇ. ಲೇಖಕರು ಸಾಮಾನ್ಯವಾಗಿ ವಿಷಯವನ್ನು ಆಳವಾಗಿ ಅರ್ಥಮಾಡಿಕೊಂಡಿರುತ್ತಾರೆ. ಮಹಿಳೆಯರು ಬಯಸುವುದೂ ಇದನ್ನೇ ಅಲ್ಲವೆ?

Actor Arjun Kapoor and Actress Parineeti Chopra for the special announcement of Daawat-E- Ishq at Yashraj Studio in Andheri (west) PIC/NIKESH GURAV

ಅದರೆ ಎಲ್ಲರಿಗೂ ಅತೀಹೆಚ್ಚು ಆಕರ್ಷಕ ವ್ಯಕ್ತಿತ್ವ ಅದರೆ ಅದುವೇ ನಟನೆ
10. ನಟ: ಬಾಲಿವುಡ್ ನಟರು ಜನರ ಆಕರ್ಷಣೆಯ ಕೇಂದ್ರ. ಹೀಗಾಗಿ ಯಾವುದೇ ಚಿತ್ರರಂಗ, ಟಿವಿ ಅಭಿನಯ ಜನರನ್ನು ಆಕರ್ಷಿಸಿಯೇ ಬಿಡುತ್ತದೆ. ತೆರೆಯ ಮೇಲಿನ ವರ್ಚಸ್ಸು ನಿಜ ಜೀವನದ ಆಕರ್ಷಣೆಯಾಗಿಬಿಡುತ್ತದೆ.

Comments are closed.