ಕರ್ನಾಟಕ

2 ಸಾವಿರ ಹಾಗೂ 500 ರೂಪಾಯಿ ನೋಟಿನಲ್ಲಿ ಏನೇನು ವಿಶೇಷತೆ ಇದೆ ಗೊತ್ತಾ?

Pinterest LinkedIn Tumblr

ವಿಶೇಶ ವರದಿ: 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಚಲಾವಣೆಗೆ ಬರುತ್ತಿರುವುದು ಇದೇ ಮೊದಲು. ಈಗ ಬಂದಿರುವ 2 ಸಾವಿರ ರೂಪಾಯಿ ನೋಟು ಕಾಳಧನಿಕರಿಗೆ ಪಾಲಿಗೆ ಶಾಪವಾಗಿದ್ದಲ್ಲದೇ ಅವರಿಗೆ ನಡುಕ ಹುಟ್ಟಿಸಿದೆ. ಅತ್ಯಂತ ಸುಧಾರಿತ ಸೆಕ್ಯೂರಿಟಿ ತಂತ್ರಜ್ಞಾನವನ್ನು ಈ ನೋಟು ಹೊಂದಿದ್ದು ಮೈಸೂರಿನಲ್ಲಿರುವ ಆರ್.ಬಿ.ಐ. ಮುದ್ರಣಾಲಯದಲ್ಲಿ ನೋಟು ಮುದ್ರಣವಾಗಿದೆ ಎನ್ನಲಾಗಿದೆ.

new_notes_india-4 new_notes_india-3 new_notes_india-2 new_notes_india-1

2 ಸಾವಿರ ರೂಪಾಯಿ ನೋಟಿನ ಮುಂಭಾಗದಲ್ಲೇ ನ್ಯಾನೋ ಜಿಪಿಎಸ್ ಚಿಪ್ ಅಳವಡಿಸಲಾಗಿದೆ. ಸ್ಯಾಟ್‍ಲೈಟ್‍ನಿಂದ ಸಿಗ್ನಲ್ ಕಳುಹಿಸಿದ್ರೆ ಎನ್‍ಜಿಸಿ ಸಿಗ್ನಲ್ ಪ್ರತಿಫಲಿಸುತ್ತದೆ. ಇದು ಸೀರಿಯಲ್ ನಂಬರ್ ಜೊತೆಗೆ ನೋಟು ಇರುವ ಪ್ರದೇಶದ ಮಾಹಿತಿ ನೀಡುತ್ತದೆ. ಇದರಿಂದ ಯಾವ ಪ್ರದೇಶದಲ್ಲಿ ಹಣ ಇಟ್ಟರೂ ಪತ್ತೆ ಹಚ್ಚುವುದು ಸುಲಭ. ಯಾವುದೇ ಪ್ರದೇಶದಲ್ಲಿ ಅಪಾರ ಪ್ರಮಾಣದ ಹಣ ಕೂಡಿಟ್ಟಿದ್ದರೆ ಎನ್‍ಜಿಸಿ ಸಿಗ್ನಲ್ ಮೂಲಕ ಪತ್ತೆ ಹಚ್ಚಬಹುದು.

ಎತ್ತರ 66 ಮಿಮಿ, ಅಗಲ 166 ಮಿಮಿ, ಬಣ್ಣ-ಗುಲಾಬಿ. ಎಡಭಾಗದಲ್ಲಿ ಹಿಂದಿ ಹಾಗೂ ಬಲಭಾಗದಲ್ಲಿ ಆಂಗ್ಲ ಸಂಖ್ಯೆಯಲ್ಲಿ ರೂಪಾಯಿ ಬರಹವಿದೆ. ಎಡಭಾಗದಲ್ಲಿ ಮಹಾತ್ಮಾ ಗಾಂಧಿ ಭಾವಚಿತ್ರವಿದ್ದು, ನಡುಭಾಗದಲ್ಲಿ ಆರ್‍ಬಿಐ ಗವರ್ನರ್ ಸಹಿ ಇದೆ. ಬಲಭಾಗದ ಅಂಚಿನಲ್ಲಿ ರಾಷ್ಟ್ರಲಾಂಛನವಿದೆ. ಹಸಿರು ಬಣ್ಣದಲ್ಲಿ ಅಂಕಿಗಳ ಉಲ್ಲೇಖವಿದ್ದು, ಬೆಳಕಿನಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತೆ. ಅಂಧರಿಗೂ ನೋಟಿನ ಮೌಲ್ಯ ಅರ್ಥವಾಗಲು ಬ್ರೈಲ್ ಲಿಪಿ ಬಳಕೆ ಮಾಡಲಾಗಿದೆ.

ನೋಟಿನ ಹಿಂಭಾಗದಲ್ಲಿ ಮಂಗಳ ಗ್ರಹಕ್ಕೆ ರವಾನಿಸಲಾದ ಭಾರತದ ಉಪಗ್ರಹದ ಚಿತ್ರವಿದೆ. ಕನ್ನಡ ಸೇರಿ ಒಟ್ಟು 15 ಭಾಷೆಗಳಲ್ಲಿ ರೂಪಾಯಿ ಬರಹವಿದೆ. ನೋಟು ಮುದ್ರಣಗೊಂಡ ವರ್ಷದ ಉಲ್ಲೇಖ, ಸ್ವಚ್ಛಭಾರತದ ಲಾಂಛನ ಹಾಗೂ ಘೋಷವಾಕ್ಯವಿದೆ.

500 ರೂ. ನೋಟ್ ವಿಶೇಷತೆ: 500 ರೂಪಾಯಿ ನೋಟು ಚಲಾವಣೆಯಿಂದ ಹೊರಹೋಗಿಲ್ಲ. ಬದಲಿಗೆ ಹೊಸ ರೂಪದೊಂದಿಗೆ ನೋಟು ಮಾರುಕಟ್ಟೆಗೆ ಬರುತ್ತಿದೆ. 500 ರೂ. ನೋಟಿನ ಎಡಭಾಗದಲ್ಲಿ ಹಿಂದಿ, ಬಲಭಾಗದಲ್ಲಿ ಆಂಗ್ಲ ಸಂಖ್ಯೆಯಲ್ಲಿ ರೂಪಾಯಿ ಬರಹವಿದೆ. ಎಡಭಾಗದಲ್ಲಿ ಮಹಾತ್ಮಾ ಗಾಂಧಿ ಭಾವಚಿತ್ರ, ನಡುಭಾಗದಲ್ಲಿ ಆರ್‍ಬಿಐ ಗವರ್ನರ್ ಸಹಿ, ಬಲಭಾಗದ ಅಂಚಿನಲ್ಲಿ ರಾಷ್ಟ್ರಲಾಂಛನವಿದೆ. ಹಸಿರು ಬಣ್ಣದಲ್ಲಿ ಅಂಕಿಗಳ ಉಲ್ಲೇಖವಿದ್ದು, ಬೆಳಕಿನಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತದೆ. ಅಂಧರಿಗೂ ನೋಟಿನ ಮೌಲ್ಯ ಅರ್ಥವಾಗಲು ಬ್ರೈಲ್ ಲಿಪಿ ಬಳಸಲಾಗಿದೆ.

ನೋಟಿನಲ್ಲಿ ಏನೇನಿದೆ…
ನೋಟಿನ ಹಿಂಭಾಗದಲ್ಲಿ ಕೆಂಪುಕೋಟೆಯ ಚಿತ್ರವಿದೆ. ಕನ್ನಡ ಸೇರಿ ಒಟ್ಟು 15 ಭಾಷೆಗಳಲ್ಲಿ ರೂಪಾಯಿ ಬರಹವಿದ್ದು, ನೋಟು ಮುದ್ರಣಗೊಂಡ ವರ್ಷದ ಉಲ್ಲೇಖವಿದೆ. ಸ್ವಚ್ಛಭಾರತದ ಲಾಂಛನ ಹಾಗೂ ಘೋಷವಾಕ್ಯವಿದೆ.

Comments are closed.