ಕರ್ನಾಟಕ

ಪ್ರತಿ ನಿಯಮಗಳನ್ನು ಗಾಳಿಗೆ ತೂರಿದ ಮಾಸ್ತಿಗುಡಿ

Pinterest LinkedIn Tumblr

masti_gudiಬೆಂಗಳೂರು(ನ.08): ‘ಮಾಸ್ತಿಗುಡಿ’ ಚಿತ್ರತಂಡ ಮೊದಲಿನಿಂದಲೂ ನಿಯಮಗಳನ್ನು ಗಾಳಿಗೆ ತೂರುತ್ತಲೇ ಬಂದಿತ್ತು. ಕಾಡಿನಲ್ಲಿ ಚಿತ್ರೀಕರಣ, ಟೀಸರ್‌ನಲ್ಲಿ ಪ್ರಾಣಿಗಳನ್ನು ತೋರಿಸುವುದರಿಂದ ಹಿಡಿದು ಚಿತ್ರತಂಡ ಪ್ರತಿ ಹಂತದಲ್ಲೂ ಕಾನೂನುಬದ್ಧ ನಿಯಮಗಳನ್ನು ಪಾಲಿಸಿರಲಿಲ್ಲ. ಸಿನಿಮಾ ಸೆಟ್ಟೇರಿದಾಗ ಭಿನ್ನ ಲುಕ್‌ನಲ್ಲಿ ನಟ ವಿಜಯ್ ಅವರ ಫೋಟೋಶೂಟ್ ಮಾಡಿದ್ದು ನಾಗರಹೊಳೆಯ ಕಾಡಿನಲ್ಲಿ. ಕಬಿನಿ ಹಿನ್ನೀರಿಗೆ ಅಂಟಿಕೊಂಡಿರುವ ನಾಗರಹೊಳೆ ಕಾಡಿನಲ್ಲಿ ಮಾಸ್ತಮ್ಮ ದೇವಿ ಗುಡಿ ಇದೆ. ಈ ಜಾಗದ ಹೆಸರೇ ಮಾಸ್ತಿಗುಡಿ. ಇದಿರುವುದು ಕಾಡಿನ ಕೋರ್ ಏರಿಯಾದಲ್ಲಿ. ಇಲ್ಲಿಗೆ ಅರಣ್ಯಾಕಾರಿಗಳ ಹೊರತಾಗಿ ಬೇರಾರಿಗೂ ಪ್ರವೇಶವಿಲ್ಲ. ಹಾಗಾದರೆ, ಮಾಸ್ತಿಗುಡಿಯ ಟೀಸರ್ ಹಾಗೂ ೆಟೋಶೂಟ್ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದು ಯಾರು? ಕಾಡುಗಳ್ಳರನ್ನು ಪತ್ತೆ ಮಾಡುವುದಕ್ಕಾಗಿಯೇ ಅರಣ್ಯದಲ್ಲಿ ಕಟ್ಟಲಾಗಿರುವ ವಾಚ್ ಟವರ್‌ಗಳನ್ನು ಸಾರ್ವಜನಿಕವಾಗಿ ತೋರಿಸುವಂತಿಲ್ಲ. ಆದರೆ, ಈ ವಾಚ್ ಟವರ್‌ಗಳ ಮೇಲೆಯೇ ೆಟೋಶೂಟ್ ನಡೆಸಲಾಗಿದೆ. ಕೋರ್ ಏರಿಯಾದೊಳಗೆ ಹೋಗಬೇಕೆಂದರೆ, ಮಹಾ ಪ್ರಧಾನ ಅರಣ್ಯ ಸಂರಕ್ಷಣಾಕಾರಿಯವರ ಅನುಮತಿ ಬೇಕು. ಆದರೆ, ಚಿತ್ರತಂಡಕ್ಕೆ ಯಾರಿಂದಲೂ ಅಕೃತ ಅನುಮತಿ ಸಿಕ್ಕಿಲ್ಲ. ಈಗ ತಿಪ್ಪಗೊಂಡನಹಳ್ಳಿ ಜಲಾಯಶದಲ್ಲೂ ಹಾಗೆ ನಿಯಮ ಮೀರಿ ಚಿತ್ರೀಕರಣ ನಡೆಸಲಾಗಿದೆ!
ಸಾವಿನ ಸುತ್ತ 10 ಪ್ರಶ್ನೆಗಳು
– ಸ್ವತಃ ರವಿವರ್ಮ ಹೇಳಿಕೊಂಡಂತೆ, ಅವರ ವೃತ್ತಿ ಜೀವನದಲ್ಲೇ ಇದು ಅತ್ಯಂತ ಅಪಾಯಕಾರಿ ಸಾಹಸ. ದರ್ಶನ್ ನಟನೆಯ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನಂತರ ಇಂಥ ಅಪಾಯಕಾರಿ ಸಾಹಸಕ್ಕೆ ರವಿವರ್ಮ ಮುಂದಾಗಿದ್ದರು. ಆದರೆ, ಇಂಥ ಕಠಿಣ ಸಾಹಸ ಮಾಡುವಾಗ ಕನಿಷ್ಠ ಮುಂಜಾಗ್ರತೆ ಏಕೆ ವಹಿಸಲಿಲ್ಲ?
– ‘ನಮಗೆ ಈಜು ಬರೋದಿಲ್ಲ, ನಿರ್ದೇಶಕ ಮತ್ತು ಸಹ ನಿರ್ದೇಶಕರು ಸೇಫ್ಟಿ ಒದಗಿಸುತ್ತೇವೆ ಎಂದಿದ್ದಾರೆ. ಅವರ ಮೇಲೆ ನಂಬಿಕೆ ಇಟ್ಟು 100 ಅಡಿ ಎತ್ತರದಿಂದ ಹಾರಲು ಹೋಗುತ್ತಿದ್ದೇವೆ’ ಎಂದು ಹೇಳಿಯೇ ಉದಯ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈಜು ಗೊತ್ತಿಲ್ಲದವರನ್ನು ಇಂಥ ದೃಶ್ಯದಲ್ಲೇಕೆ ಬಳಸಿದ್ದರು?
– ಇಬ್ಬರು ಖಳನಟರು ತಮ್ಮ ಭಯವನ್ನು ಮುಚ್ಚಿಟ್ಟುಕೊಂಡು, ನಿರ್ದೇಶಕ, ನಾಯಕ ಹಾಗೂ ಸಾಹಸ ನಿರ್ದೇಶಕರ ಮೇಲೆ ನಂಬಿಕೆ ಇಟ್ಟಿದ್ದರು. ಚಿತ್ರತಂಡ ಆ ನಂಬಿಕೆಯನ್ನೇಕೆ ಉಳಿಸಿಕೊಳ್ಳಲಿಲ್ಲ?
– ಚಿತ್ರತಂಡದ ಅತೀ ಉತ್ಸಾಹವೇ ಈ ದುರಂತಕ್ಕೆ ಕಾರಣವಾಯಿತೇ?
– ಹೆಲಿಕಾಪ್ಟರ್‌ನಿಂದ ಹಾರುವುದು ಕ್ಲೋಸ್‌ಅಪ್ ದೃಶ್ಯವಲ್ಲ. ಲಾಂಗ್ ಶಾಟ್‌ನ ಈ ದೃಶ್ಯಕ್ಕೆ ರಿಯಲ್ ಸ್ಟಂಟ್ ಮಾಡಬೇಕಿತ್ತೇ? ಆ ದೃಶ್ಯಕ್ಕೆ ಡ್ಯೂಪ್ ಬಳಸಬಹುದಿತ್ತಲ್ಲವೇ?
– ಈಜು ಬರುವುದಿಲ್ಲ ಅಂತ ಗೊತ್ತಿದ್ದರೂ ಸಾಹಸ ನಿರ್ದೇಶಕರು ರೋಪ್ ಕಟ್ಟುವ ವ್ಯವಸ್ಥೆಯನ್ನೇಕೆ ಮಾಡಲಿಲ್ಲ?
– ನೀರಿಗೆ ಹಾರುವಾಗ ರಕ್ಷಿಸಬೇಕಾದ ಬೋಟ್‌ಗಳ ಸ್ಥಿತಿಯನ್ನು ಪರಿಶೀಲಿಸಲಿಲ್ಲವೇಕೆ?
– ರಕ್ಷಿಸುವಂಥ ವ್ಯವಸ್ಥೆಗಳಿಲ್ಲವೆಂದ ಮೇಲೆ ಜಲಾಯಶಯದ ಮಧ್ಯ ಭಾಗದಲ್ಲಿ ಚಿತ್ರೀಕರಣ ಮಾಡಲು ಮುಂದಾಗಿದ್ದೇಕೆ?
– ಅಪಾಯಕಾರಿ ಸಾಹಸಕ್ಕೆ ತಿಪ್ಪಗೊಂಡನಹಳ್ಳಿ ಜಲಾಯಶದಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ್ದಾದರೂ ಹೇಗೆ?
– ಖಳನಟರ ಸಿಕ್ಸ್‌ಪ್ಯಾಕ್ ತೋರಿಸಲೆಂದೇ ಜಾಕೆಟ್ ನೀಡಲಿಲ್ಲವೇ?
ಚಿತ್ರದ ಕತೆ ಏನು?
ನಾಗಶೇಖರ್ ನಿರ್ದೇಶನದ ‘ಮಾಸ್ತಿಗುಡಿ’ಯಲ್ಲಿ ದುನಿಯಾ ವಿಜಯ್ ನಾಯಕ. 1999ರಲ್ಲಿ ಮಧ್ಯಪ್ರದೇಶದ ಹುಲಿ ಬೇಟೆಗಾರರು ನಾಗರಹೊಳೆಯಲ್ಲಿ ಹಾಕಿದ್ದ ಜಾ ಟ್ರ್ಯಾಪ್‌ಗೆ ಬಲ ಮುಂಗಾಲು ಸಿಕ್ಕಿಸಿಕೊಂಡ ಹುಲಿಯನ್ನು ಅರಣ್ಯಾಕಾರಿಗಳು ಸತತ ಏಳು ದಿನಗಳ ಕಾರ್ಯಾಚರಣೆ ನಂತರ ಅರಿವಳಿಕೆ ಮದ್ದಿನ ಸೂಜಿ ಹಾರಿಸಿ ಮಾಸ್ತಿಗುಡಿಯಲ್ಲಿ ಸೆರೆಹಿಡಿದಿದ್ದರು. ಜಾ ಟ್ರ್ಯಾಪ್‌ಗೆ ಸಿಕ್ಕ ಅದರ ಮುಂಗಾಲನ್ನು ಮಂಡಿಯವರೆಗೂ ಶಸಚಿಕಿತ್ಸೆ ಮೂಲಕ ಕತ್ತರಿಸಬೇಕಾಗಿ ಬಂತು. ದಕ್ಷಿಣ ಭಾರತದಲ್ಲಿಯೇ ಮೊದಲ ಜಾ ಟ್ರ್ಯಾಪ್ ಹುಲಿಬೇಟೆ ಪ್ರಕರಣ ಇದಾಗಿದ್ದರಿಂದ ರಾಷ್ಟ್ರಮಟ್ಟದಲ್ಲಿ ಇದು ಸುದ್ದಿಯಾಯಿತು. ಈ ಪ್ರಕರಣವನ್ನೇ ಆಧರಿಸಿ ‘ಮಾಸ್ತಿಗುಡಿ’ ಚಿತ್ರ ಮೂಡಿಬರುತ್ತಿದೆ. ಇದರ ಜತೆಗೆ ಅರಣ್ಯ ಸಂಪತ್ತಿನ ಲೂಟಿ, ಹುಲಿ ಸಂತತಿಯ ಕುರಿತೂ ಸಿನಿಮಾ ಧ್ವನಿ ಹೊಮ್ಮಿಸಲಿದೆ. ಹಾಗೆ ಅರಣ್ಯ ಸಂಪತ್ತನ್ನು ಲೂಟಿ ಮಾಡುವ ಪಾತ್ರಗಳಲ್ಲಿ ಕಾಣಿಸಿಕೊಂಡಿವರೇ ಅನಿಲ್ ಮತ್ತು ಉದಯ್.

Comments are closed.