ಕರ್ನಾಟಕ

ಡ್ರಗ್ಸ್ ಸೇವನೆಗೆ ಒತ್ತಾಯ: ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

Pinterest LinkedIn Tumblr

sachinಬೀದರ್: ಡ್ರಗ್ಸ್ ಸೇವಿಸುವಂತೆ ಸಹಪಾಠಿಗಳ ಕಿರಿಕುಳದಿಂದ ಬೇಸತ್ತ ಎಂಜಿನಿಯರಿಂಗ್ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವಿದ್ಯಾನಗರ ಕಾಲೋನಿಯಲ್ಲಿ ನಡೆದಿದೆ.

ಸಚಿನ್ ಕುಮಾರ್(19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತನ ಸ್ನೇಹಿತರು ನಿತ್ಯ ಡ್ರಗ್ಸ್ ಸೇವಿಸುವಂತೆ ಒತ್ತಾಯಿಸುತ್ತದ್ದರು. ಅಲ್ಲದೇ ಮನೆಯಿಂದ ಹಣ ತಂದುಕೊಡುವಂತೆ ಕಿರುಕುಳ ನೀಡುತ್ತಿದ್ದರು ಎಂದು ಸಚಿನ್ ಕುಮಾರ್ ಡೆತ್ ನೋಟ್‍ನಲ್ಲಿ ಆರೋಪಿಸಿದ್ದಾನೆ.

ಸಚಿನ್ ಕುಮಾರ್ ಬೀದರ್‍ನ ಗುರುನಾನಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದನು. ಆಸ್ಪತ್ರೆಯಲ್ಲಿ ಸಚಿನ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಗಾಂಧಿಗಂಜ್ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

Comments are closed.