ಮನೋರಂಜನೆ

ಬಿಗ್‌ಬಾಸ್‌ ಮನೆಯ ‘ಎಲಿಮಿನೇಷನ್‌’ಗೆ ಹೊಸ ಟ್ವಿಸ್ಟ್ ! ಔಟ್ ಆದ ಶಾಲಿನಿ-ಶೀತಲ್ ಎಲ್ಲಿಗೆ ಹೋದರು … ?

Pinterest LinkedIn Tumblr

sha

ಕನ್ನಡ ಬಿಗ್‌ಬಾಸ್‌ನಲ್ಲಿ ಹೊಸ ಟ್ವಿಸ್ಟ್ …! ಶನಿವಾರ ಬಿಗ್‌ಬಾಸ್‌ ಮನೆಯಿಂದ ಔಟ್ ಆದ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಅತ್ತ ಹೊರಗೂ ಬಾರದೆ ಇತ್ತ ಬಿಗ್‌ಬಾಸ್‌ಮನೆಗೂ ಸೇರಿಲ್ಲ. ಆಗಾದರೆ ಎಲ್ಲಿ ಹೋದರು..? ಮುಂದಿದೆ ಓದಿ…

shalini

ಶನಿವಾರ ಬಿಗ್‌ಬಾಸ್‌ಮನೆಯಿಂದ ಶೀತಲ್‌ಶೆಟ್ಟಿ ಹಾಗು ಶಾಲಿನಿ ಹೊರಬಿದ್ದಿದ್ದರು. ಅವರಲ್ಲಿ ಶಾಲಿನಿ ಸಿಕ್ರೆಟ್ ರೂಂನಲ್ಲಿದ್ದುಕೊಂಡು ಬಿಗ್‌ಬಾಸ್‌ಮನೆ ಮಂದಿಯ ಆಟವನ್ನು ನೋಡಿ, ಸ್ವಲ್ಪ ಸಮಯದ ಬಳಿಕ ಮತ್ತೆ ಬಿಗ್‌ಬಾಸ್‌ಮನೆಗೆ ಹೋಗಲು ಸೂಚಿಸಲಾಗಿತ್ತು. ಆದರೆ ಅವರೊಂದಿಗೆ ಇದೀಗ ಶೀತಲ್ ಶೆಟ್ಟಿ ಕೂಡ ಜೊತೆಯಾಗಿದ್ದಾರೆ. ರವಿವಾರ ಸುದೀಪ್ ಅವರು ಶೀತಲ್ ಶೆಟ್ಟಿಗೂ ಮತ್ತೊಂದು ಅವಕಾಶ ನೀಡುವ ಮೂಲಕ ಇಬ್ಬರಿಗೆ ಬಿಗ್‌ಬಾಸ್‌ಮನೆಯ ಪಕ್ಕದ ಸಿಕ್ರೆಟ್ ರೂಂನಲ್ಲಿದ್ದುಕೊಂಡು ಯಾರೆಲ್ಲ ಯಾವ ರೀತಿ ಹಿಂದಿನಿಂದ ಆಟ ಆಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಅವಕಾಶ ನೀಡಿದೆ.

ಇದಕ್ಕೂ ಮೊದಲು ಮಾಲವಿಕಾ, ಮೋಹನ್, ರೇಖಾ ಮತ್ತಿತರರು ಶಾಲಿನಿ ಬಗ್ಗೆ ಮಾತನಾಡುತ್ತಿದ್ದದ್ದನ್ನು ಶಾಲಿನಿ ಸೀಕ್ರೆಟ್ ರೂಮ್ ನಲ್ಲಿದ್ದುಕೊಂಡು ಎಲ್ಲವನ್ನು ಕೇಳಿಸಿಕೊಳ್ಳುತ್ತಿದ್ದರು. ಇದೀಗ ಇಬ್ಬರು ಸೀಕ್ರೆಟ್ ರೂಮ್ ಸೇರಿರುಡುದ್ ಮತ್ತಷ್ಟು ಟ್ವಿಸ್ಟ್ ತಂದಿದೆ.

Comments are closed.