ಕರ್ನಾಟಕ

ರಾಜ್ಯ ಪ್ರಶಸ್ತಿ ವಿವಾದ, ಸಿದ್ದರಾಮಯ್ಯ, ಉಮಾಶ್ರೀ ವಿರುದ್ದ ನ್ಯಾಯಾಂಗ ನಿಂದನೆ ಅರ್ಜಿ

Pinterest LinkedIn Tumblr

siddu-n.jpgaaaaaaaaಬೆಂಗಳೂರು,ನ.೪- ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗಿದೆ.
ವಕೀಲರಾದ ಎನ್.ಶಂಕರಪ್ಪ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿತರಣೆ ಮಾಡಲಾಗಿದೆ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಹೈಕೋರ್ಟ್ ಮುಂದೆ ಪ್ರಮಾಣ ಪತ್ರ ಸಲ್ಲಿಸಿದ ಬಳಿಕವೂ ಅರ್ಹರಿಗೆ ಪ್ರಶಸ್ತಿ ನೀಡದೆ ಸರ್ಕಾರ ಅನ್ಯಾಯ ಮಾಡಿ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಅವರು ಹೇಳಿದ್ದಾರೆ. ೨೦೧೩ರಲ್ಲಿಯೇ ಸಾಹಿತಿ ಸತ್ಯ ವಿಠಲ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಸಾಹಿತಿ ಸತ್ಯವಿಠಲ ಅವರು ೮೬ ಪುಸ್ತಕಗಳನ್ನು ಬರೆದಂತಹ ಲೇಖಕರು.

ಹೈಕೋರ್ಟ್ ನಿರ್ದೇಶನದ ಮೇರೆಗೆ ಮಾರ್ಗದರ್ಶಿ ಸೂತ್ರಗಳನ್ನು ರಚನೆ ಮಾಡಿ ೨೦೧೬ರಲ್ಲಿ ಸತ್ಯವಿಠಲ ಅವರಿಗೆ ಪ್ರಶಸ್ತಿ ನೀಡದೆ ದ್ರೋಹ ಮಾಡಿದೆ ಎಂದು ಮುಖ್ಯಮಂತ್ರಿ sಸಿದ್ದರಾಮಯ್ಯ ಸೇರಿದಂತೆ ಮೂವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗಿದೆ.

Comments are closed.