ಕರ್ನಾಟಕ

ಬ್ಯಾಟರಿ ಬೆಳಕಿನಲ್ಲಿ ಬೆಳೆ ಹಾನಿ ವೀಕ್ಷಣೆ

Pinterest LinkedIn Tumblr

batteryದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ ಬಿದರಕೆರೆ ಗ್ರಾಮದ ರೈತರ ಹೊಲಕ್ಕೆ ಕೇಂದ್ರ ತಂಡ ಶುಕ್ರವಾರ ರಾತ್ರಿ ಭೇಟಿ ನೀಡಿ, ಬ್ಯಾಟರಿ ಬೆಳಕಿನಲ್ಲಿ ಬೆಳೆ ಹಾನಿ ವೀಕ್ಷಿಸಿತು. ತಂಡ ರಾತ್ರಿ ಭೇಟಿ ನೀಡಿರುವುದರಿಂದ ವಾಸ್ತವ ಸ್ಥಿತಿ ಅರಿಯಲು ವಿಫಲವಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿದರು.

ಸಂಜೆ 4ರಿಂದ ರೈತರು ಕಾಯುತ್ತಿದ್ದರು. ಕತ್ತಲಾದ ಬಳಿಕ ಸಂಜೆ 6.35ಕ್ಕೆ ತಂಡ ರೈತರ ಹೊಲಕ್ಕೆ ಬಂತು. ಕೆಮರಾ ಹಾಗೂ ಮೊಬೈಲ್, ಬ್ಯಾಟರಿ ಬೆಳಕಿನ್ನಲ್ಲಿ ತಂಡ ಹಾನಿಯ ವೀಕ್ಷಣೆ ನಡೆಸಿತು. 15 ನಿಮಿಷದಲ್ಲಿ ವೀಕ್ಷಣೆ ಮಾಡಿ ರೈತರಿಂದ ಮಾಹಿತಿ ಪಡೆದು, ತಂಡ ಕಾಮಗೇತನಹಳ್ಳಿಗೆ ತೆರಳಿತು.

ಕೇಂದ್ರ ಬರ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ನೀರಜಾ ಅಡಿದಾಮ ಅವರಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾಹಿತಿ ನೀಡಿದರು. ಜಗಳೂರು ಶಾಸಕ ಎಚ್.ಪಿ. ರಾಜೇಶ್ ಸಹ ಹಾಜರಿದ್ದರು.

ಹದಿನೈದು ದಿನದೊಳಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೇಂದ್ರ ಬರ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ನೀರಜಾ ತಿಳಿಸಿದರು.

ರೈತರ ಅಸಮಾಧಾನ
ಅಧ್ಯಯನ ತಂಡ ರಾತ್ರಿ ಹೊಲಕ್ಕೆ ಬಂದಿದ್ದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದರು. ತಂಡ ವಾಸ್ತವ ಅರಿಯುವಲ್ಲಿ ವಿಫಲವಾಗಿದೆ ಎಂದು ರೈತರ ಆರೋಪಿಸಿದರು.

Comments are closed.