ಮುಂಬೈ: ‘ಗೋಲ್ ಮಾಲ್– 4’ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಸಲು ದೀಪಿಕಾ ಪಡುಕೋಣೆ, ಅಲೀಯಾ ಭಟ್ ರೇಸ್‌ನಿಂದ ದೂರ ಉಳಿದಿದ್ದು, ಆ ಪಾತ್ರಕ್ಕೆ ಪರಿಣಿತಿ ಚೋಪ್ರಾ ಅವರು ಸೂಕ್ತ ಎಂದು ಹೇಳಲಾಗಿದೆ.
‘ಗೋಲ್ ಮಾಲ್– 4’ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ಪ್ರಮುಖ ಸ್ತ್ರಿ ಪಾತ್ರದಲ್ಲಿ ಅಭಿನಯಿಸಲು ಸೂಕ್ತ ನಟಿಯರಿಗಾಗಿ ಹುಡುಕಾಟ ನಡೆಸಿದ್ದರು. ಈ ಹಿಂದೆ ದೀಪಿಕಾ ಪಡುಕೋಣೆ, ಅಲೀಯಾ ಭಟ್ ಅವರ ಹೆಸರು ಕೇಳಿ ಬಂದಿತ್ತು. ಅಂತಿಮವಾಗಿ ಪರಿಣಿತಿ ಚೋಪ್ರಾ ಅವರೇ ಸೂಕ್ತ ಎಂದು ಮೂಲಗಳು ತಿಳಿಸಿವೆ.
‘ಗೋಲ್ ಮಾಲ್’ ಚಿತ್ರ 2006ರಲ್ಲಿ ಬಿಡುಗಡೆಯಾಗಿದ್ದು, ಅಜಯ್ ದೇವಗನ್, ಹರ್ಷಾದ್ ವರ್ಸಿ, ಶರ್ಮನ್ ಜೋಷಿ, ತುಷಾರ್ ಕಪೂರ್, ರಿಮೀ ಸೇನ್ ಕಾಣಿಸಿಕೊಂಡಿದ್ದರು.
ಗೋಲ್ ಮಾಲ್‌ನ ಮುಂದುವರಿದ ಭಾಗವಾಗಿ 2008ರಲ್ಲಿ ‘ಗೋಲ್ ಮಾಲ್–2’, ‘ಗೋಲ್ ಮಾಲ್–3’ 2010ರಲ್ಲಿ ಚಿತ್ರ ತೆರೆ ಕಂಡಿದ್ದು, ಅಜಯ್ ದೇವಗನ್, ತುಷಾರ್ ಕಪೂರ್, ಶ್ರೇಯಾಸ್, ಕರೀನಾ ಕಪೂರ್, ಮಿಥುನ್ ಚಕ್ರವರ್ತಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು.
ಗೋಲ್ ಮಾಲ್ ಶಿರ್ಷಿಕೆಯ ಮೂರು ಚಿತ್ರಗಳು ದೀಪಾವಳಿ ಹಬ್ಬದ ಸಂರ್ದಭದಲ್ಲಿ ತೆರೆ ಕಂಡಿದ್ದು, ಹಣ ಗಳಿಕೆಯಲ್ಲಿ ಯಶಸ್ವಿಯಾಗಿದವು. ಅಜಯ್ ದೇವಗನ್, ತುಷಾರ್ ಕಪೂರ್ ‘ಗೋಲ್ ಮಾಲ್–4’ರಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
ಮುಂದಿನ ವರ್ಷ ದೀಪಾವಳಿ ಹಬ್ಬದ ವೇಳೆಗೆ ‘ಗೋಲ್ ಮಾಲ್–4’ ಹಾಗೂ ಆಮಿತಾಬ್ ಬಚ್ಚನ್ ಅಭಿನಯದ ‘ಆನ್‌ಕೇನ್–2,ಚಿತ್ರಗಳು ಬಿಡುಗಡೆಯಾಗಲಿದ್ದು ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಕೆರಳಿಸಿವೆ.
Comments are closed.