ಕರ್ನಾಟಕ

ವಿಟ್ರಾಗ್ ಜ್ಯುವೆಲ್ಸ್‌ನಲ್ಲಿ ಸುಲಿಗೆ: 7 ಮಂದಿ ಸೆರೆ

Pinterest LinkedIn Tumblr

arrestಬೆಂಗಳೂರು, ಅ. ೨೮ – ಜಯನಗರದ ವಿಟ್ರಾಗ್ ಚಿನ್ನಾಭರಣ ಅಂಗಡಿಯಲ್ಲಿ ನಡೆದಿದ್ದ ಸುಲಿಗೆ ಪ್ರಕರಣವನ್ನು ಭೇದಿಸಿರುವ ಆಗ್ನೇಯ ವಿಭಾಗದ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿ 31 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನೇತಾಜಿ ನಗರದ ರಂಜಿತ್ ಕುಮಾರ್ (25), ಸಂತೋಷ್ ಆಲಿಯಾಸ್ ಸಂತು (25), ದಿವಾಕರ ಅಲಿಯಾಸ್ ದಿವಾ (25), ಕೆಪಿ ಅಗ್ರಹಾರದ ಕಿಶನ್ ಪ್ರಸಾದ್ ಆಲಿಯಾಸ್ ಕಿಶನ್ (22), ಶರವಣ ಆಲಿಯಾಸ್ ಪಟ್ರೆ (30) ಬಂಧಿತ ಆರೋಪಿಗಳಾಗಿದ್ದು, ಇವರೊಂದಿಗೆ ಆಭರವಣವನ್ನು ಖರೀದಿ ಮಾಡಿದ ರೋಷನ್ ಹಾಗೂ ಪಂಕಜ್ ಸೋನಿ ಅವರನ್ನು ಬಂಧಿಸಲಾಗಿದೆ.
ವಿಟ್ರಾಗ್ ಚಿನ್ನಾಭರಣ ಅಂಗಡಿಯಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ ಕುಮಾರ್ ಅವರು ಕಳೆದ ಮೇ 11ರ ಮಧ್ಯಾಹ್ನ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರವೀಂದರ್ ಜತೆ 10 ಲಕ್ಷ ರೂ. ನಗದು, ಚಿನ್ನಾಭರಣಗಳ ಬ್ಯಾಗ್‌ನ್ನು ಇಟ್ಟುಕೊಂಡು ಜಯನಗರ 3ನೇ ಬ್ಲಾಕ್‌ನ ಈಜುಕೊಳದ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಬಂಧಿತ ಆರೋಪಿಗಳಲ್ಲಿ ಇಬ್ಬರು ಏಕಾ-ಏಕಿ ಕುಮಾರ್ ಹಾಗೂ ರವೀಂದರ್ ಅವರನ್ನು ಅಡ್ಡಗಟ್ಟಿ ಹಿಡಿದು ಎಳೆದಾಡಿ ಜಗಳ ತೆಗೆದಿದ್ದು, ಅಷ್ಟರಲ್ಲಿ ಮತ್ತಿಬ್ಬರು ಆರೋಪಿಗಳು ಬೈಕ್‌ನಲ್ಲಿದ್ದ ನಗದು, ಚಿನ್ನಾಭರಣಗಳ ಬ್ಯಾಗನ್ನು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ತಿಲಕ್ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ 4 ಲಕ್ಷ ನಗದು, 50 ಗ್ರಾಂ ವಜ್ರ, 35 ಗ್ರಾಂ ಚಿನ್ನ ಸೇರಿದಂತೆ 31 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಆಗ್ನೇಯ ವಲಯದ ಡಿಸಿಪಿ ಡಾ. ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.

Comments are closed.