ಬೆಂಗಳೂರು(ಅ.27): ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು, ಪ್ರತಿಕ್ರಿಯಿಸಿರುವ ರುದ್ರೇಶ್ ಪತ್ನಿ ವಿದ್ಯಾವತಿ, ನನಗೆ ಸದ್ಯ ನ್ಯಾಯ ಸಿಕ್ಕಿದೆ ಅನ್ನಿಸುತ್ತಿದೆ. ಇನ್ಮುಂದೆ ಬೆಂಗಳೂರಲ್ಲಾಗಲಿ, ದೇಶದಲ್ಲಾಗಲಿ ಈ ರೀತಿಯ ಯಾವುದೇ ಘಟನೆ ನಡೆಯಬಾರದು. ಇಂತಹ ಪರಿಸ್ಥಿತಿ ಮತ್ಯಾರಿಗೂ ಬರಬಾರದು. ಪೊಲೀಸರು ಮತ್ತಷ್ಟು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಕರ್ನಾಟಕ
Comments are closed.