ರಾಷ್ಟ್ರೀಯ

ತಿಂಗಳ ಖರ್ಚಿಗೆ ರಂಭಾ ಇಟ್ಟ ಬೇಡಿಕೆ ಎಷ್ಟು ಗೊತ್ತಾ..?

Pinterest LinkedIn Tumblr

ramba3ಚೆನ್ನೈ(ಅ.27): ನಿನ್ನೆಯಷ್ಟೇ ತನ್ನ ದಾಂಪತ್ಯದ ಹಕ್ಕುಗಳಿಗಾಗಿ ಕೋರ್ಟ್ ಮೊರೆಹೋಗಿದ್ದ ರಂಭಾ ತನ್ನ ಮತ್ತು ತನ್ನ ಮಕ್ಕಳ ತಿಂಗಳ ಖರ್ಚಿಗಾಗಿ ತನ್ನ ಪರಿತ್ಯಕ್ತ ಪತಿಯಿಂದ ತಿಂಗಳಿಗೆ 25 ಲಕ್ಷ ರೂಪಾಯಿ ಕೊಡಿಸುವಂತೆ ಕೋರಿ ಕೋರ್ಟ್`ನಲ್ಲಿ ಮನವಿ ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಹಿಂದೂ ವಿವಾಹ ಕಾಯ್ದೆ ಪ್ರಕಾರ, ತನ್ನ ಖರ್ಚಿಗೆ ತಿಂಗಳಿಗೆ 1.5 ಲಕ್ಷ ರೂ. ಮತ್ತು ಇಬ್ಬರು ಮಕ್ಕಳ ವಿದ್ಯಾಭ್ಯಾಸ ಇನ್ನಿತರೆ ವೆಚ್ಚಕ್ಕಾಗಿ ತಲಾ 50 ಸಾವಿರ ರೂಪಾಯಿ ಕೊಡಿಸುವಂತೆ ಕೋರ್ಟ್`ಗೆ ಮೊರೆ ಹೋಗಿದ್ಧಾರೆ.
ರಂಭಾ ಅರ್ಜಿಯ ತಿಳಿಸಿರುವಂತೆ, ಮದುವೆಗೆ ಮುನ್ನ ನಾನು ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಈಗ ನಾನು ಯಾವುದೇ ಚಿತ್ರಗಳಲ್ಲಿ ನಟಿಸದ ಹಿನ್ನೆಲೆಯಲ್ಲಿ ಜೀವನ ನಡೆಸಲು ಮತ್ತು ಮಕ್ಕಳ ಪೋಷಣೆಗೆ ಯಾವುದೇ ಆದಾಯದ ಮೂಲ ಇಲ್ಲ ಎಂದು ತಿಳಿಸಿದ್ದಾರೆ.
ರಂಭಾ ಅವರ ಹಿರಿಯ ಪುತ್ರಿ ಲಾವಣ್ಯ ಖಾಸಗಿ ಬಶಾಲೆಯಲ್ಲಿ ಓದುತ್ತಿದ್ದು, ವಾರ್ಷಿಕ 3.5 ಲಕ್ಷ ರೂಪಾಯಿ ಶಾಲಾ ಶುಲ್ಕ ಪಾವತಿಸಬೇಕಿದೆ. ಒಂದೂವರೆ ವರ್ಷದ 2ನೇ ಪುತ್ರ ಸಾಶಾಗೆ ನಿಯಮಿತವಾಗಿ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕಿರುವುದರಿಂದ ಒಟ್ಟು 2.5 ಲಕ್ಷ ರೂ. ಅಗತ್ಯವಿದೆ ಎಂದು ಕೋರ್ಟ್`ನಲ್ಲಿ ಮನವಿ ಮಾಡಲಾಗಿದೆ.

Comments are closed.