ರಾಷ್ಟ್ರೀಯ

ಉದ್ಯಮಿಯಿಂದ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ 400 ಫ್ಲ್ಯಾಟ್ಸ್, 1260 ಕಾರು ಗಿಫ್ಟ್

Pinterest LinkedIn Tumblr

savjiಸೂರತ್: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್, ಗಿಫ್ಟ್ ಕೊಡುವುದು ಸಂಪ್ರದಾಯ. ಆದರೆ ಸೂರತ್ ಮೂಲದ ವಜ್ರದ ವ್ಯಾಪಾರಿ ತನ್ನ ಉದ್ಯೋಗಿಗಳಿಗೆ ಪ್ರತಿವರ್ಷ ನೀಡುವ ಗಿಫ್ಟ್ ಬಗ್ಗೆ ಕೇಳಿದರೆ ನಿಮಗೆ ಅಚ್ಚರಿಯಾಗುತ್ತೆ.
ಹೌದು. ಕಲಿಯುಗದ ಈ ಕೊಡುಗೈ ದಾನಿ ಸೂರತ್ ನ ಕೋಟ್ಯಧೀಶ್ವರ ವಜ್ರ ವ್ಯಾಪಾರಿಯಾದ ಸಾವ್ಜಿ ಧೋಲ್ಕಿಯಾ ಅವರು ತನ್ನ ಉದ್ಯೋಗಿಗಳಿಗೆ ಈ ಬಾರಿ 400 ಫ್ಲ್ಯಾಟ್ಸ್ ಹಾಗೂ 1260 ಕಾರುಗಳನ್ನು ದೀಪಾವಳಿ ಬೋನಸ್ ಆಗಿ ನೀಡಿದ್ದಾರೆ!
ಧೋಲ್ಕಿಯಾ ಅವರ ಹರೇ ಕೃಷ್ಣಾ ಎಕ್ಸ್ ಪೋರ್ಟ್ಸ್ ಸಂಸ್ಥೆ ತನ್ನ ಉದ್ಯೋಗಿಗಳಿಗಾಗಿ ಈ ವರ್ಷದ ದೀಪಾವಳಿಗೆ ಬರೋಬ್ಬರಿ 51 ಕೋಟಿ ರೂಪಾಯಿಯಷ್ಟು ಖರ್ಚು ಮಾಡಿದೆ. ಸುಮಾರು 1,716 ಉದ್ಯೋಗಿಗಳು ಕಂಪನಿಯ ಉತ್ತಮ ಕೆಲಸಗಾರರು ಎಂದು ಹೆಸರಿಸಲಾಗಿತ್ತಂತೆ.
ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಾರಿಯ ದೀಪಾವಳಿ ಬೋನಸ್ ಬಗ್ಗೆ ಘೋಷಣೆ ಮಾಡಲಾಗಿದೆ. ಕಳೆದ ವರ್ಷ ಧೋಲ್ಕಿಯಾ ಅವರ ಕಂಪನಿ ತನ್ನ ಉದ್ಯೋಗಿಗಳಿಗೆ 491 ಕಾರು ಹಾಗೂ 200 ಫ್ಲ್ಯಾಟ್ಸ್ ಗಳನ್ನು ಗಿಫ್ಟ್ ಆಗಿ ಕೊಟ್ಟಿತ್ತು.

Comments are closed.