ಕರ್ನಾಟಕ

ಮುಂದಿನ 72 ಗಂಟೆಗಳಲ್ಲಿ ದಕ್ಷಿಣ ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ

Pinterest LinkedIn Tumblr

rain2ಬೆಂಗಳೂರು(ಅ.27): ಈಶಾನ್ಯ ಮುಂಗಾರು ಅಕ್ಟೋಬರ್‌ 30ರಿಂದ ಆರಂಭವಾಗಲಿದ್ದು, ತಮಿಳುನಾಡು ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 72 ಗಂಟೆಗಳಲ್ಲಿ ‘ಕ್ಯಾಂಟ್‌’ ಚಂಡಮಾರುತವು ಬಂಗಾಳಕೊಲ್ಲಿಯ ಪೂರ್ವ ಕೇಂದ್ರ ಭಾಗದಿಂದ ದಕ್ಷಿಣದ ಕಡೆ ಸಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಶಾನ್ಯ ಮುಂಗಾರಿನಿಂದಾಗಿ 2015ರಲ್ಲಿ ತಮಿಳುನಾಡಿನಲ್ಲಿ ದಾಖಲೆ ಮಳೆಯಾಗಿತ್ತು. ‘ಕ್ಯಾಂಟ್‌’ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿರುವ ಕಾರಣ ವಿಶಾಖಪಟ್ಟಣ ಮತ್ತು ಮಚಲೀಪಟ್ಟಣದ ಜಿಲ್ಲಾಧಿಕಾರಿಗಳಿಗೆ ಆಂಧ್ರಪ್ರದೇಶ ಸರ್ಕಾರ, ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ.
ಈ ವೇಳೆ ಸಮುದ್ರದಲ್ಲಿ ಏರಿಳಿತಗಳು ಕಂಡುಬರುವ ಕಾರಣ ಅಕ್ಟೋಬರ್‌ 27ರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

Comments are closed.