ರಾಯಚೂರು: ಜಿಲ್ಲೆಯಲ್ಲಿ ಇಂದು ನಡೆದ ಸ್ವಚ್ಛಭಾರತ ಅಭಿಯಾನದ ವೇಳೆ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಪೊರಕೆಯಿಂದ ಥಳಿಸಿ ದರ್ಪ ಮೆರೆದಿದ್ದಾರೆ.
ಇಲ್ಲಿನ ನಗರ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಅಭಿಯಾನದಲ್ಲಿ ಭಾಗವಹಿಸಿದ ಕಟ್ಟಾ ಸುಬ್ರಮಣ್ಯ ನಾಯ್ಡು, ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ್ ಎದುರೇ ಕಾರ್ಯಕರ್ತನಿಗೆ ಪೊರಕೆ ಸೇವೆ ಮಾಡಿದ್ದಾರೆ. ಕಟ್ಟಾ ಸುಬ್ರಮಣ್ಯಮಣ್ಯ ನಾಯ್ಡು ಟೋಪಿಯನ್ನ ಬೀಳಿಸಿದ ಹಾಗೂ ಮಾಧ್ಯಮಗಳ ಕ್ಯಾಮೆರಾಗೆ ಅಡ್ಡ ಬಂದ ಕಾರಣಕ್ಕೆ ಕಾರ್ಯಕರ್ತನಿಗೆ ಪೊರಕೆಯಿಂದ ಹೊಡೆದಿದ್ದಾರೆ.