ಮನೋರಂಜನೆ

ಅಜಯ್ ದೇವಗನ್ ಅಭಿನಯದ ಶಿವಾಯ ಅ.28 ತೆರೆಗೆ

Pinterest LinkedIn Tumblr

ajayಮುಂಬೈ: ದೀಪಾವಳಿ ಸಮೀಪಿಸುತ್ತಿರುವಂತೆ ಶಿವನಾಮ ಸ್ಮರಣೆ ಜೋರಾಗಿದೆ. ದೀಪಾವಳಿಗೂ ಶಿವನಿಗೂ ಎಲ್ಲಿಯ ಸಂಬಂಧ ಎಂದುಕೊಳ್ಳುತ್ತಿರಬಹುದು. ಸಂಬಂಧ ಇದೆ, ಅಜಯ್ ದೇವಗನ್ ಅಭಿನಯಿಸಿರುವ ಬಹುನಿರೀಕ್ಷಿತ ಶಿವಾಯ ಚಿತ್ರ ಇದೇ ಅ.28ರಂದು ವಿಶ್ವಾದ್ಯಂತ ತೆರೆಕಾಣುತ್ತಿದೆ. ವಿಶೇಷ ಎಂದರೆ ಈ ಚಿತ್ರದ ನಾಯಕ ಅಜಯ್ ದೇವಗನ್ ಅಭಿನಯಕ್ಕಾಗಿ ಒಂದು ರೂಪಾಯಿ ಸಂಭಾವನೆಯನ್ನೂ ಪಡೆಯಲಿಲ್ಲವಂತೆ.

ಹೌದು, ಶಿವಾಯ ಚಿತ್ರದ ಅಭಿನಯಕ್ಕೆ ಅಜಯ್ ದೇವಗನ್ ಸಂಭಾವನೆ ಪಡೆಯಲಿಲ್ಲ. ಇದಕ್ಕೆ ಕಾರಣ ಈ ಚಿತ್ರದ ನಿರ್ಮಾಪಕ, ನಿರ್ದೇಶಕ ಬೇರಾರೂ ಅಲ್ಲ, ಸ್ವತಃ ಅಜಯ್ ದೇವಗನ್. ಈ ಕುರಿತು ಪ್ರತಿಕ್ರಿಯಿಸಿರುವ ಅಜಯ್, ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ನಿರೀಕ್ಷೆಗಿಂತ ಅಧಿಕ ಬಂಡವಾಳವನ್ನು ಚಿತ್ರಕ್ಕೆ ಹೂಡಿಕೆ ಮಾಡಿರುವುದರಿಂದ ಚಿತ್ರದ ಸಂಭಾವನೆ ರೂಪದಲ್ಲಿ ಯಾವುದೇ ರೀತಿ ಹಣವನ್ನು ನನ್ನ ಖಾತೆಗೆ ವರ್ಗಾಯಿಸಿಲ್ಲ. ಚಿತ್ರವನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಲುಪಿಸುವುದೇ ನನ್ನ ಗುರಿಯಾಗಿದೆ. ಚಿತ್ರ ನಿರ್ಮಾಣ ನನಗೆ ಹೊಸತು. ಆದ್ದರಿಂದ ಅಧಿಕ ಒತ್ತಡವಿತ್ತು. ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಚಿತ್ರ ತಂಡದ ಸಹ ಸದಸ್ಯರು ಉತ್ತಮ ಬೆಂಬಲ ನೀಡಿದರು ಎಂದು ತಿಳಿಸಿದರು.

ಅಜಯ್ ದೇವಗನ್ ನಿರ್ದೇಶಿಸುತ್ತಿರುವ ದ್ವಿತೀಯ ಚಿತ್ರ ‘ಶಿವಾಯ’. ಈ ಹಿಂದೆ ‘ಯು ಮಿ ಔರ್ ಹಮ್ ಚಿತ್ರವನ್ನು ನಿರ್ದೇಶಿಸಿದ್ದರು. ಶಿವಾಯ ಚಿತ್ರವನ್ನು ಬಾಲ್ಕನ್ ಪರ್ವತ, ಬಲ್ಗೇರಿಯಾ, ಉತ್ತರಾಖಂಡ ಮತ್ತು ಹೈದರಾಬಾದ್ನಲ್ಲಿ ಚಿತ್ರೀಕರಿಸಲಾಗಿದೆ.

Comments are closed.