ಅಂತರಾಷ್ಟ್ರೀಯ

ಪರಿಸರ ಶುದ್ಧಿಗಾಗಿ ಜಪಾನ್ ನಲ್ಲಿ ಭಾರತೀಯ ಅರ್ಚಕರಿಂದ ಯಜ್ಞ

Pinterest LinkedIn Tumblr

%e0%b2%9c%e0%b2%bb%e0%b2%aa%e0%b2%bb%e0%b2%a8ಟೋಕಿಯೋ (ಜಪಾನ್): ಪರಿಸರ ಶುದ್ಧಿಗಾಗಿ ಭಾರತದಿಂದ ಬಂದಿರುವ ಅರ್ಚಕರ ತಂಡವೊಂದು ು ಟೋಕಿಯೋದಲ್ಲಿ ನಿರಂತರ ಯಜ್ಞ ನಡೆಸುತ್ತಿದ್ದಾರೆ. 108 ಯಜ್ಞಕುಂಡಗಳಲ್ಲಿ 9 ದಿನಗಳ ಕಾಲ ಸತತವಾಗಿ ಈ ಯಜ್ಞ ನಡೆಯಲಿದೆ.

ಮೌಂಟ್ ಫ್ಯುಜಿಯಲ್ಲಿ ಗುರುವಾರ ಆರಂಭವಾಗಿರುವ ಈ ಯಜ್ಞದ ವಿಧಿಗಳಲ್ಲಿ ಭಾರತ ಮತ್ತು ಅಮೆರಿಕದಿಂದ ಬಂದಿರುವ 125 ಮಂದಿ ವೇದ ಪಾರಂಗತರು ಪಾಲ್ಗೊಂಡಿದ್ದಾರೆ.

ಈ ಅರ್ಚಕರ ತಂಡದ ಜೊತೆಗೆ ಭಾರತದ 15 ಮಂದಿಯ ಅಡುಗೆ ತಂಡವೂ ಟೋಕಿಯೋಗೆ ಆಗಮಿಸಿದ್ದು, ಈ ತಂಡ ಜಪಾನೀಯರಿಗೆ ಭಾರತೀಯ ಅಡುಗೆ ರುಚಿಯನ್ನು ಉಣಬಡಿಸುತ್ತಿದೆ.

ಜಪಾನಿನ ಪರಿಸರ ಮಾಲಿನ್ಯವನ್ನು ನಿವಾರಿಸುವುದು ಮತ್ತು ನೈಸರ್ಗಿಕ ಪ್ರಕೋಪಗಳನಿಂದ ದೇಶವನ್ನು ರಕ್ಷಿಸುವ ಉದ್ದೇಶದೊಂದಿಗೆ ಈ ಯಜ್ಞವನ್ನು ಮಾಡಲಾಗುತ್ತಿದೆ. ಯಜ್ಞ ನಡೆಸುತ್ತಿರುವ ಬಹುತೇಕ ವಿದ್ವಾಂಸರು ಭಾರತದ ಕಾಶಿಯಿಂದ ಜಪಾನಿಗೆ ಆಗಮಿಸಿದ್ದಾರೆ.

Comments are closed.