ಅಂತರಾಷ್ಟ್ರೀಯ

ನಿಂತ ಕಾರನ್ನು ಹಿಂದಿಕ್ಕಿದ ಸೈಕಲ್ ಸವಾರನಿಗೆ ದಂಡ!

Pinterest LinkedIn Tumblr

SP Annamalai_Cycle_Riding (10)ಮೆಲ್ಬೋರ್ನ್: 65 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ನಿಂತಿದ್ದ ಕಾರನ್ನು ಎಡಗಡೆಯಿಂದ ಓವರ್ ಟೇಕ್ ಮಾಡಿ ಮುಂದೆ ಹೋಗಿದ್ದಕ್ಕೆ 152 ಡಾಲರ್ (ಅಂದಾಜು 8 ಸಾವಿರ ರೂ) ದಂಡ ಹಾಕಿರೋ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಲಾರಿ ಡಂಕನ್ ಎಂಬವರು ಸೈಕಲ್ ಚಾಲನೆ ಮಾಡುತ್ತಾ ಹೋಗುತ್ತಿದ್ದ ರಸ್ತೆಯಲ್ಲಿ ಎಡಬದಿಯ ಇಂಡಿಕೇಟರ್ ಹಾಕಿದ್ದ ಕಾರು ನಿಂತಿತ್ತು. ಆದರೆ ಕಾರ್ ಚಲಿಸುತ್ತಿರಲಿಲ್ಲವಾದ್ದರಿಂದ ಎರಡೂ ಬದಿಯಿಂದ ಪಾದಚಾರಿಗಳು ರಸ್ತೆ ದಾಟುತ್ತಿದ್ದರು. ಹಾಗಾಗಿ ನಿಂತಿದ್ದ ಕಾರನ್ನು ಎಡಗಡೆಯಿಂದ ಹಿಂದಿಕ್ಕಿ ಡಂಕನ್ ಮುಂದೆ ಸಾಗಿದ್ದಾರೆ. ಆದ್ರೆ ಪೋಲಿಸರು ಡಂಕನ್‍ರನ್ನು ತಡೆದು 152 ಆಸ್ಟ್ರೇಲಿಯನ್ ಡಾಲರ್ ದಂಡ ವಿಧಿಸಿದ್ದಾರೆ.

ಸೈಕ್ಲಿಂಗ್ ಗ್ರೂಪ್ ಬೈಸಿಕಲ್ ನೆಟ್‍ವರ್ಕ್(ಬಿಎನ್)ನ ಸದಸ್ಯರಾಗಿರೋ ಡಂಕನ್‍ರನ್ನು ಪೋಲಿಸರು ತಡೆದು ಕಾರನ್ನು ಎಡಗಡೆಯಿಂದ ಹಿಂದಿಕ್ಕಿದ್ದು ಯಾಕೆ ಎಂದು ಪ್ರಶ್ನಿಸಿದಾಗ ಅವರು ಶಾಕ್ ಆಗಿದ್ರು. ನಾನು ಏನಾದ್ರೂ ತಪ್ಪು ಮಾಡಿದ್ದೀನಾ ಎಂದು ನನಗೆ ಗೊತ್ತಾಗಲಿಲ್ಲ. ನಾನು ಮಾಡಿದ್ದು ಅಪಾಯಕಾರಿ ಎಂದು ಅನ್ನಿಸಲಿಲ್ಲ ಅಂತ ಪೊಲೀಸರಿಗೆ ಡಂಕನ್ ಉತ್ತರಿಸಿದ್ದಾರೆ.

ನಿಯಮದ ಪ್ರಕಾರ ಯಾವುದೇ ವಾಹನ ಎಡಗಡೆಗೆ ತಿರುಗುತ್ತಿರುವಾಗ ಅಥವಾ ಎಡಬದಿಯ ಇಂಡಿಕೇಟರ್ ಹಾಕಿ ಸಿಗ್ನಲ್ ನೀಡುತ್ತಿರುವಾಗ ಸೈಕಲ್ ಸವಾರ ಎಡಗಡೆ ಹೋಗುವುದಾಗಲೀ ಓವರ್ ಟೇಕ್ ಮಾಡುವುದಾಗಲೀ ಮಾಡಬಾರದು.

ಬೈಸಿಕಲ್ ನೆಟ್‍ವರ್ಕ್‍ನವರು ಡಂಕನ್‍ಗಾಗಿ ವಕೀಲರನ್ನು ನೇಮಿಸಿ ಮೆಲ್ಬೋರ್ನ್‍ನ ಮ್ಯಾಜಿಸ್ಟ್ರೇಟ್ ನ್ಯಾಯಲಯದಲ್ಲಿ ವಾದ ಮಂಡಿಸಿದರಾದ್ರೂ ಕೇಸ್ ಸೋತಿದ್ದಾರೆ.

Comments are closed.