ರಾಷ್ಟ್ರೀಯ

ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿರಾಟ್‌ಗೆ ವಿದಾಯ

Pinterest LinkedIn Tumblr

viಕೊಚ್ಚಿ: ಸುದೀರ್ಘ ಐದು ದಶಕಗಳ ಸೇವೆಯ ಬಳಿಕ ಜಗತ್ತಿನ ಅತ್ಯಂತ ಹಳೆಯ ಯುದ್ಧವಿಮಾನ ವಾಹಕ ನೌಕೆ ಐಎನ್‌ಎಸ್‌ ವಿರಾಟ್‌ಗೆ ಭಾರತೀಯ ನೌಕಾಪಡೆ ವಿದಾಯ ಹೇಳಲಿದೆ.

ಭಾರತೀಯ ನೌಕಾಪಡೆಯಲ್ಲಿ 55 ವರ್ಷಕ್ಕೂ ಹೆಚ್ಚುಕಾಲ ಸೇವೆ ಸಲ್ಲಿಸಿರುವ ವಿರಾಟ್‌ ಬ್ರಿಟೀಷ್ ಕಾಲದ ರಾಯಲ್‌ ನೌಕಾಪಡೆಯಲ್ಲಿಯೂ ಸುಮಾರು 27 ವರ್ಷಗಳಷ್ಟು ಕಾಲ ಸುದೀರ್ಘ ಸೇವೆ ಸಲ್ಲಿಸಿದೆ. ನೌಕಾಪಡೆಯ ದಕ್ಷಿಣ ವಲಯ ಮುಖ್ಯ ಕಮಾಂಡರ್‌ ರಿಯರ್‌ ಅಡ್ಮಿರಲ್‌ ನಾಡಕರ್ಣಿ ಎರ್ನಾಕುಲಂನ ಕೊಚ್ಚಿ ಹಡಗುಕಟ್ಟೆಯಲ್ಲಿ ವಿದಾಯ ಹೇಳಲಿದ್ದಾರೆ.

ವಿದಾಯದ ಬಳಿಕ ವಿರಾಟ್‌ ನೌಕೆಯನ್ನು ಆಂಧ್ರಪ್ರದೇಶ ಸರ್ಕಾರದ ಸುಪರ್ದಿಗೆ ವಹಿಸಲು ಭಾರತೀಯ ನೌಕಾಪಡೆ ಸಮ್ಮತಿಸಿದೆ.

ಆಂಧ್ರಪ್ರದೇಶ ಸರ್ಕಾರವೂ ಸಹ ಐಎನ್‌ಎಸ್‌ ವಿರಾಟ್‌ ನೌಕೆಯನ್ನು ಪಡೆಯಲು ಉತ್ಸುಕವಾಗಿದ್ದು, ಆ ಮೂಲಕ ತಮ್ಮ ಪ್ರವಾಸೋದ್ಯಮ ಚಟುವಟಿಕೆಗೆ ಹೊಸ ರೂಪ ನೀಡುವ ಯೋಜನೆಯಲ್ಲಿದೆ.

Comments are closed.