ಕರ್ನಾಟಕ

ಯುವತಿಗೆ ಪದೇ ಪದೇ ಫೋನ್ ಕರೆ: ಪೇದೆ ವಿರುದ್ಧ ದೂರು

Pinterest LinkedIn Tumblr

pedeಹಾವೇರಿ: ಪೊಲೀಸರು ಅಂದ್ರೆ ಜನರಿಗೆ ರಕ್ಷಣೆ ನೀಡಬೇಕಾದವರು. ಆದ್ರೆ ಹಾವೇರಿ ಜಿಲ್ಲೆಯಲ್ಲೊಬ್ಬ ಪೊಲೀಸ್ ಪೇದೆ ಯುವತಿಯೊಬ್ಬಳಿಗೆ ಪದೇ ಪದೇ ಪೋನ್ ಮಾಡಿ ಕಿರುಕುಳ ನೀಡುತ್ತಿದ್ದಾನಂತೆ. ಯುವತಿ ಪೇದೆಗೆ ಪೋನ್ ಮಾಡಬೇಡ ಅಂದಿದ್ದಕ್ಕೆ ಯುವತಿಯನ್ನ ಪೊಲೀಸ್ ಕ್ವಾರ್ಟರ್ಸ್‍ಗೆ ಕರೆದು ಪೇದೆ ಅಶ್ಲೀಲ ಪದಗಳಿಂದ ಬೈದು, ಪೊಲೀಸ್ ದರ್ಪ ತೋರಿಸಿದ್ದಾನೆ. ಸಾಲದ್ದಕ್ಕೆ ತನ್ನ ಮನೆಯಲ್ಲಿ ನಡೆದ ವಿಷಯವನ್ನ ಯಾರಿಗಾದದ್ರೂ ತಿಳಿಸಿದ್ರೆ ಜೀವಂತವಾಗಿ ಬಿಡಲ್ಲ ಅಂತಾ ಜೀವ ಬೆದರಿಕೆಯನ್ನೂ ಹಾಕಿದ್ದಾನೆ. ಆದರೆ ಈಗ ಯುವತಿ ಪೇದೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ಗಂಗಾಧರ ಶಿಗ್ಗಾಂವಿ ತಾಲೂಕಿನ ಗ್ರಾಮವೊಂದರ ಯುವತಿಗೆ ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡ್ತಿದ್ನಂತೆ. ಕೊನೆಗೆ ಈ ಕಿರುಕುಳ ತಾಳಲಾರದೇ ಬೇಸತ್ತ ಯುವತಿ ಆತನಿಗೆ ಕಾಲ್ ಮಾಡದಂತೆ ವಾರ್ನಿಂಗ್ ನೀಡಿದ್ದಾಳೆ. ಹೀಗೆ ಹೇಳಿದ್ದಕ್ಕೆ ಯುವತಿಯನ್ನು ಕ್ವಾರ್ಟರ್ಸ್‍ಗೆ ಕರೆದು ಅಶ್ಲೀಲ ಪದಗಳಿಂದ ಬೈದಿದ್ದಾನೆ. ಅಲ್ಲದೆ ಈ ವಿಷಯವನ್ನ ಮನೆಯವರಿಗೆ ತಿಳಿಸಿದ್ರೆ ಜೀವಂತವಾಗಿ ಬಿಡೋದಿಲ್ಲ ಅಂತಾ ಜೀವ ಬೆದರಿಕೆ ಹಾಕಿದ್ದಾನೆ.

ಪೇದೆ ಗಂಗಾಧರನಿಗೂ ಮತ್ತು ಯುವತಿಗೂ ಕೆಲವು ದಿನಗಳಿಂದ ಪರಿಚಯ ಇತ್ತು. ಆದರೆ ಇದನ್ನೇ ಬಂಡವಾಳ ಮಾಡಿಕೊಡಿದ್ದ ಗಂಗಾಧರ ಫೋನಲ್ಲಿ ಕಾಟ ಕೊಡೋಕೆ ಶುರು ಮಾಡಿದ. ಈ ಯುವತಿಗೆ ಮಾತ್ರವಲ್ಲದೇ, ಪಟ್ಟಣದ ಕೆಲವು ಕಾಲೇಜು ಯುವತಿಯರು ಮತ್ತು ಪ್ರೇಮಿಗಳಿಗೂ ಕಿರುಕುಳ ನೀಡ್ತಿದ್ನಂತೆ. ಹೀಗಾಗಿ ಈತನನ್ನ ಬಂಧಿಸಿ, ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತಾ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದ ಜನರು ಪೊಲೀಸ್ ಪೇದೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು.

ಒಟ್ಟಿನಲ್ಲಿ ಸದ್ಯ ಪೇದೆ ವಿರುದ್ಧ ದೂರು ದಾಖಲಾಗಿದ್ದು, ನ್ಯಾಯ ಕೊಡಬೇಕಾದ ಪೊಲೀಸರು ಮುಂದೇನು ಮಾಡುತ್ತಾರೆ ಎಂದು ಕಾದುನೋಡಬೇಕಿದೆ.

Comments are closed.