ಕರ್ನಾಟಕ

ಬೀದಿನಾಯಿ ಕೊಲೆ ಪ್ರಕರಣ : ಪ್ರಾಣಿಪ್ರಿಯರಿಂದ ಪಂಚಾಯತ್ ಸದಸ್ಯರು ಹಾಗೂ ಅಧ್ಯಕ್ಷರ ವಿರುದ್ಧ ದೂರು ದಾಖಲು

Pinterest LinkedIn Tumblr

dog

ಎರ್ನಾಕುಲಂ : ಬೀದಿ ನಾಯಿಗಳನ್ನು ಕೊಂದ ಪ್ರಕರಣದಲ್ಲಿ ಕಾಲಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಹಿತ 17ಸದಸ್ಯರನ್ನು ಪೊಲೀಸರು ಬಂಧಿಸಿದ್ದು, ಜಾಮೀನಿನಮೇಲೆ ಬಿಡುಗಡೆಗೊಳಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಶಾಸಕರ ರೋಜಿಎಂ ಜೋನ್ ಇವರನ್ನು ಜಾಮೀನು ನೀಡಿ ಬಿಡುಗಡೆಗೊಳಿಸಿದರು ಎನ್ನಲಾಗಿದೆ.

ಅದೇ ವೇಳೆ ನಾಯಿಗಳನ್ನು ಕೊಂದಿರುವುದು ವಿವಾದವಾದ ನಂತರ ಹೂತಿದ್ದ ನಾಯಿಗಳ ಶವವನ್ನು ಹೊರಗೆ ತೆಗೆದಿದ್ದು, ವೆಟರಿನರಿ ಸರ್ಜನ್ ನಡೆಸಿದ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರಿಗೆ ಇನ್ನೂ ಲಭ್ಯವಾಗಿಲ್ಲ. ರಾಸಾಯನಿಕ ಪರೀಕ್ಷೆಗಾಗಿ ಅವುಗಳ ಶವವನ್ನು ಕಳುಹಿಸಲಾಗಿದೆ.

ನಾಯಿಗಳನ್ನು ಕೊಂದು ಪ್ರದರ್ಶಿಸಿದ ಘಟನೆಯಲ್ಲಿ ಪ್ರಾಣಿಪ್ರಿಯರು ದೂರು ನೀಡಿದ್ದರು. ಈ ಕುರಿತು ಸುಪ್ರೀಂಕೋರ್ಟು ವರದಿ ಕೇಳಿತ್ತು. ಘಟನೆಯಲ್ಲಿ ಪೊಲೀಸರು ಯಾವೆಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದರ ವರದಿಯನ್ನು ಸುಪ್ರೀಂಕೋರ್ಟು ಕೇಳಿತ್ತು.

ಬೀದಿನಾಯಿಗಳನ್ನು ಹಿಡಿಯುವ ತಂಡದ ನೆರವಿನೊಂದಿಗೆ ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಮೂವತ್ತು ನಾಯಿಗಳನ್ನು ಹಿಡಿದು ಕೊಲ್ಲಲಾಗಿತ್ತು. ಕಾಲಿಗೆ ಹಗ್ಗ ಕಟ್ಟಿ ನೆಲಕ್ಕೆ ಬಡಿದು ಕೊಲ್ಲಲಾಗಿದೆ ಎಂದು ಆರೋಪ ಹೊರಿಸಲಾಗಿದೆ.ನಾಯಿಗಳ ಶವಗಳ ಮುಂದೆ ನಿಂತು ಪಂಚಾಯತ್ ಸದಸ್ಯರು ಫೋಟೊ ತೆಗೆಸಿಕೊಂಡಿದ್ದರು ಎಂದು ವರದಿತಿಳಿಸಿದೆ.

Comments are closed.