ಕರ್ನಾಟಕ

ಸಿದ್ದರಾಮಯ್ಯ-ಪರಮಾಪ್ತ ಮರೀಗೌಡ ಸಮಾಗಮ

Pinterest LinkedIn Tumblr

cm

ಮೈಸೂರು,ಅ,6-ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮಾಪ್ತ ಮರೀಗೌಡ ಸಮಾಗಮ ಇಂದು ಅಚ್ಚರಿಗೆ ಕಾರಣವಾಯಿತು.

ಜಿಲ್ಲಾಧಿಕಾರಿ ಶಿಖಾ ರವರಿಗೆ ದಮ್ಕಿ ಹಾಕಿ ಕೆಲ ಕಾಲ ಸೆರೆವಾಸ ಅನುಭವಿಸಿ ನ್ಯಾಯಾಲಯದಿಂದ ಜಾಮೀನು ಪಡೆದು ಅದೃಶ್ಯನಾಗಿದ್ದ ಮುಖ್ಯಮಂತ್ರಿಗಳ ಪರಮಾಪ್ತ ಮರೀಗೌಡ ಇಂದು ಬೆಳಗ್ಗೆ ಮಂಡಕಳ್ಳಿ ದಿಢೀರ್ ಪ್ರತ್ಯಕ್ಷನಾಗಿ ಮುಖ್ಯಮಂತ್ರಿಗಳಿಗೆ ಹೂ ಗುಚ್ಚ ನೀಡಿ ಎಲ್ಲರನ್ನು ಚಕಿತಗೊಳಿಸದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಮೈಸೂರು ಹಾಗೂ ವರುಣಾ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತನ್ನ ಅಧಿಪತ್ಯವನ್ನು ಸಾಧಿಸಿ ಎಲ್ಲಾ ಕಾರ್ಯಕ್ರಮಗಳಲ್ಲೂ ಮುಂಚೂಣಿ ವಹಿಸಿ ಸಿ ಎಂ ಬಲಗೈ ಬಂಟ ಎಂದು ಪ್ರಸಿದ್ಧವಾದ ವ್ಯಕ್ತಿಯಾಗಿದ್ದ ಮರೀಗೌಡರು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಪಾಲ್ಗೊಳ್ಳುತ್ತಿದ್ದರು. ಕೆಲವು ವೇಳೆ ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ತಾವೇ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಉದಾಹರಣೆಗಳು ಇವೆ.

ಮುಖ್ಯಮಂತ್ರಿಗಳ ಆಪ್ತ ಎಂಬ ಕಾರಣಕ್ಕೆ ಎಲ್ಲಾ ಅಧಿಕಾರಿಗಳು ಈತನಿಗೆ ವಿಶೇಷ ಗೌರವ ನೀಡುತ್ತಿದ್ದರು. ಇದು ಆತನಿಗೆ ವರದಾನವಾಗಿತ್ತು. ಈ ಸಂದರ್ಭದಲ್ಲಿಯೇ ಸರ್ಕಾರಿ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸುತ್ತಿದ್ದಾಗ ದಿಢೀರ್ ಎಂದು ಆಗಮಿಸಿದ್ದ ಮರೀಗೌಡ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್ ನವೀನ್ ಜೋಸೆಪ್ ವರ್ಗಾವಣೆಗೆ ಸಂಬಂಧಿಸಿದಂತೆ ದಮ್ಕಿ ಹಾಕಿದರು. ಈ ಪ್ರಕರಣದಲ್ಲಿ ಇವರ ವಿರುದ್ಧ ಅಂದಿನ ಜಿಲ್ಲಾಧಿಕಾರಿ ಶಿಖಾ ದೂರು ನೀಡಿದ್ದರು. ಪ್ರಕರಣ ದಾಖಲಾಗಿತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಮರೀಗೌಡ ಒಂದು ತಿಂಗಳ ನಂತರ ನ್ಯಾಯಾಲಯದ ಆದೇಶಕ್ಕೆ ಬೆದರಿ ನೇರವಾಗಿ ಪೋಲಿಸರಿಗೆ ಶರಣಾದರು.

ನಂತರ ಮರೀಗೌಡರು ಒಂದು ತಿಂಗಳ ಕಾಲ ಸೆರೆವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಗೆ ಬಂದಾಗಿನಿಂದ ಇಲ್ಲಿಯ ತನಕ ಎಲ್ಲಿಯೂ ಕಾಣಿಸಿಕೊಳ್ಳದೆ ಅದೃಶ್ಯವಾಗಿದ್ದರು. ಇಂದು ಮುಖ್ಯಮಂತ್ರಿಗಳು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದಂತೆ ದಿಢೀರ್ ಪ್ರತ್ಯಕ್ಷನಾಗಿ ಮುಖ್ಯಮಂತ್ರಿಗಳಿಗೆ ಹೂ ಗುಚ್ಚವಿರಿಸಿ ಸ್ವಾಗತಿಸಿದರು. ನಗು ಮುಗದಿಂದಲೇ ಮುಖ್ಯಮಂತ್ರಿಗಳು ಹೂ ಗುಚ್ಚ ಸ್ವೀಕರಿಸಿ ಎಲ್ಲರನ್ನು ಚಕಿತಗೊಳಿಸಿದರು.

Comments are closed.