ಕರ್ನಾಟಕ

ನಾರಿಮನ್ ರನ್ನು ಕ್ಷಮೆ ಕೇಳುವುದಿಲ್ಲ: ಈಶ್ವರಪ್ಪ

Pinterest LinkedIn Tumblr

eshwarappaಬೆಳಗಾವಿ: ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕದ ಪರವಾಗಿ ನಾರಿಮನ್ ಅವರು ವಾದ ಮಾಡುವುದೇ ಬೇಡ ಎಂದು ನಾನು ಮನವಿ ಮಾಡುತ್ತೇನೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಅವರು ತನ್ನನ್ನು ಟೀಕಿಸಿದ್ದಕ್ಕೆ ಕ್ಷಮೆ ಕೇಳಬೇಕು ಎಂದು ನಾರಿಮನ್ ಅವರು ಒತ್ತಾಯಿಸಿದ್ದರು.

ನಾರಿಮನ್ ಅವರು ರಾಜ್ಯದ ಹಿತಾಸಕ್ತಿಗೆ ಗೌರವ ಕೊಡದೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಮಾಡಿದ್ದಾರೆ. ನಮಗೆ ಅವರ ವಿರುದ್ಧ ವೈಯಕ್ತಿಕ ದ್ವೇಷವೇನೂ ಇಲ್ಲ. ಆದರೆ ನ್ಯಾಯಾಲಯದಲ್ಲಿ ಕರ್ನಾಟಕದ ಪರ ವಾದ ಮಾಡಿ ಗೆಲ್ಲಲು ಅವರು ವಿಫಲರಾಗಿರುವ ಬಗ್ಗೆ ಬೇಸರವಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

‘ನಾರಿಮನ್‌ ಅವರನ್ನು ನಂಬಬೇಡಿ ಎಂದು ನೂರು ಸಲ ಹೇಳಿದೆ. ಆದ್ರೇ ಕೇಳಲಿಲ್ಲ. ಅವರನ್ನು ಪ್ರಶ್ನಿಸಬೇಡಿ ಎಂದ್ರಿ. ನಾರಿಮನ್‌ ಅವರೇನು ದೇವ್ರಾ’? ಎಂದು ಸೋಮವಾರ ಕೆ.ಎಸ್‌.ಈಶ್ವರಪ್ಪ ಟೀಕೆಗಳ ಸುರಿಮಳೆ ಸುರಿಸಿದ್ದರು.

Comments are closed.