ಅಂತರಾಷ್ಟ್ರೀಯ

ಭಾರತ ಮಾತುಕತೆಗೆ ಬರಲಿ: ಪಾಕ್‍

Pinterest LinkedIn Tumblr

Abdul-Basitನವದೆಹಲಿ: ಬಗ್ಗಿದ್ರೆ ಜುಟ್ಟು ಹಿಡೀತಾರೆ, ಎದ್ರೆ ಕಾಲು ಹಿಡೀತಾರೆ ಅನ್ನೋದು ಪಾಕಿಸ್ತಾನದ ವಿಷಯದಲ್ಲಿ ಸಾಬೀತಾಗ್ತಿದೆ. ಭಾರತದ ಸರ್ಜಿಕಲ್ ದಾಳಿ ಬಳಿಕ ಪಾಕಿಸ್ತಾನ ಮಾತುಕತೆಗೆ ಸಿದ್ಧ ಎಂಬ ಹೊಸ ರಾಗ ಶುರು ಮಾಡಿದೆ.

ನಾವು ಮಾತುಕತೆಗೆ ಸಿದ್ಧ ಇದ್ದೀವಿ. ಆದ್ರೆ ಭಾರತ ಸಿದ್ಧವಾಗಿಲ್ಲ. ಭಾರತ ಮಾತುಕತೆಗೆ ಬರೋವರೆಗೂ ನಾವು ಕಾಯುತ್ತೀವಿ ಅಂತ ಪಾಕ್ ಹೈಕಮಿಷನರ್ ಅಬ್ದುಲ್ ಬಸೀತ್ ಹೇಳಿಕೆ ಕೊಟ್ಟಿದ್ದಾರೆ. ಯುದ್ಧ ಯಾವುದೇ ಸಮಸ್ಯೆಗೂ ಪರಿಹಾರವಲ್ಲ. ಮಾತುಕತೆಯ ಮೂಲಕ ಮಾತ್ರ ಉಭಯ ರಾಷ್ಟ್ರಗಳ ನಡುವಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ ಅಂತಾನೂ ಬಸೀತ್ ಹೇಳಿದ್ದಾರೆ.

ಭಯೋತ್ಪಾದಕ ರಾಷ್ಟ್ರ ಎಂಬ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ವೈಟ್‍ಹೌಸ್‍ಗೆ ವರದಿ ಸಲ್ಲಿಸಿದ್ದು, ಇದ್ರಲ್ಲಿ ಸುಳ್ಳುಗಳ ಸರಮಾಲೆಗಳನ್ನೇ ಪೋಣಿಸಿದೆ. ಪಾಕಿಸ್ತಾನ ಉಗ್ರವಾದ ದಮನಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಕಾರ್ಗಿಲ್‍ನಲ್ಲಿ ನಾವು ಒಳ ನುಸುಳಿಯೇ ಇರಲಿಲ್ಲ. ಪರಮಾಣು ಪ್ರಸರಣಕ್ಕೆ ಮುಂದಾಗಿಲ್ಲ ಹಾಗೂ ಒಸಾಮಾ ಬಿನ್ ಲಾಡೆನ್ ಪಾಕ್‍ನಲ್ಲಿ ಅಡಗಿಕೊಂಡಿರಲಿಲ್ಲ ಎಂದು ವರದಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಪಾಕಿಸ್ತಾನವನ್ನ ಉಗ್ರ ರಾಷ್ಟ್ರ ಎಂದು ಘೋಸಿಷಲು ಅಮೆರಿಕಾ ನಡೆಸುತ್ತಿರುವ ಸಹಿ ಸಂಗ್ರಹಕ್ಕೆ 6 ಲಕ್ಷ ಜನ ಆನ್‍ಲೈನ್‍ನಲ್ಲಿ ಸಹಿ ಹಾಕಿದ್ದಾರೆ.

Comments are closed.