
ಬೆಳಗಾವಿ(ಅ.03): ಕೇಂದ್ರ ಸರ್ಕಾರವನ್ನ ಮನವೊಲಿಸುವ ಕೆಲಸವನ್ನ ಕಳೆದೊಂದು ವಾರದಿಂದ ಮಾಡುತ್ತಿದ್ದೆವು. ನೀರಾವರಿ ಸಚಿವೆ ಉಮಾಭಾರತ ಜೊತೆ ನಾನೇ ಮಾತನಾಡಿದ್ದೆ. ನಮ್ಮ ಕೇಂದ್ರ ಸಚಿವರುಗಳು ಸಹ ಪ್ರಧಾನಿ ಮನವೊಲಿಸಿದ್ದರು. ಹೀಗಾಗಿ, ಕೇಂದ್ರಸರ್ಕಾರ ಮಧ್ಯಪ್ರವೇಶ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಧಿಕಾರ ಇರುವುದು ಸಂಸತ್ತಿಗೇ ಹೊರತು, ಸುಪ್ರೀಂಕೋರ್ಟ್`ಗಲ್ಲ, ತ್ರಿಸದಸ್ಯ ಪೀಠದ ಬಳಿ ಅರ್ಜಿ ಇರುವುದು ನೀವು ಆದೇಶ ಮಾಡುವುದು ಸರಿಯಲ್ಲ ಎಂದು ಎಜಿ ರೋಹ್ಟಗಿ ತಿಳಿಸಿದ್ದಾರೆ. ಈ ಸಮಸ್ಯೆ ಇಲ್ಲಿಗೇ ಬಗೆಹರಿಯುತ್ತೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
Comments are closed.