ರಾಯಪುರ(ಅ. 03): ಅಪರಾಧ ಮಾಡಿ ಜೈಲು ಸೇರಿದ ಕ್ರಿಮಿನಲ್’ಗಳಿಗೆ ರಾಜಾತಿಥ್ಯ ಬೇಕಂತೆ. ಉತ್ತರಪ್ರದೇಶದ ರಾಯಪುರ ಸೆಂಟ್ರಲ್ ಜೈಲಿನ 3 ಸಾವಿರಕ್ಕೂ ಹೆಚ್ಚು ಕೈದಿಗಳು 16 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪವಾಸ ನಿರಶನ ಕೈಗೊಂಡಿದ್ದಾರೆ. ಗಾಂಧೀಜಿ ಜಯಂತಿಯಾದ ನಿನ್ನೆ ಈ ಕಾರಾಗೃಹ ವಾಸಿಗಳು ಉಪವಾಸ ಆರಂಭಿಸಿದರೆನ್ನಲಾಗಿದೆ. ಜೈಲಿನಲ್ಲಿ ನೀಡುತ್ತಿರುವ ಆಹಾರ ಸರಿಯಿಲ್ಲ. ತಮಗೆ ಥ್ರೀಸ್ಟಾರ್ ಹೋಟೆಲ್’ನ ಗುಣಮಟ್ಟದ ಆಹಾರ ಬೇಕು. ಬೇರೆ ಆಹಾರ ತಮಗೆ ಬೇಡ ಎಂದು ಕೈದಿಗಳು ಪಟ್ಟುಹಿಡಿದಿದ್ದಾರೆ. ಕೈದಿಗಳು ಇಂತಹ 16 ಬೇಡಿಕೆಗಳನ್ನು ಮುಂದಿಟ್ಟಿದ್ದಾರೆನ್ನಲಾಗಿದೆ. ಇವುಗಳ ಪೈಕಿ ಕೆಲ ಅಸಂಬದ್ಧ ಬೇಡಿಕೆಗಳೂ ಇವೆ ಎಂದು ಪೊಲೀಸರು ಹೇಳುತ್ತಾರೆ. ಕೈದಿಗಳ ನ್ಯಾಯಯುತ ಬೇಡಿಕೆಗಳನ್ನು ಮಾತ್ರ ಈಡೇರಿಸುತ್ತೇವೆ ಎಂದು ಜೈಲಧಿಕಾರಿಗಳು ಭರವಸೆ ನೀಡಿದ್ದಾರೆ.
ರಾಯಪುರ ಜೈಲಿನ ಕೈದಿಗಳ ಕೆಲ ಬೇಡಿಕೆಗಳು:
1) ಜೈಲಿನಲ್ಲಿ ನೀಡುವ ಆಹಾರದ ಗುಣಮಟ್ಟ ಹೆಚ್ಚಬೇಕು
2) ಜೈಲಿನ ಆವರಣದಲ್ಲಿ ಧೂಮಪಾನ ಮಾಡಲು ಅವಕಾಶ ಕೊಡಬೇಕು
3) ಪಾಶ್ಚಿಮಾತ್ಯ ದೇಶಗಳಲ್ಲಿರುವಂತೆ ಟೆಲಿಫೋನ್ ಬೂತ್ ವ್ಯವಸ್ಥೆ
4) ಸಂಬಂಧಿಕರು ಬಂದು ಭೇಟಿಯಾಗಲು ನಿತ್ಯ ಅವಕಾಶ ನೀಡಬೇಕು.
5) ಜೀವಾವಧಿ ಶಿಕ್ಷೆ ಅನುಭವಿಸಿದ ಕೈದಿಗಳನ್ನು ಬಿಡುಗಡೆ ಮಾಡಬೇಕು.
6) ಕೈದಿಗಳ ದಿನಗೂಲಿ ಮೊತ್ತ ಹೆಚ್ಚಳವಾಗಬೇಕು.
7) ಕೈದಿಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು.
8) ಜೈಲಿನ ಕೋಣೆಗಳ ಸಂಖ್ಯೆ ಹೆಚ್ಚಳವಾಗಬೇಕು.