ರಾಷ್ಟ್ರೀಯ

ಜಯಲಲಿತಾರ ನಕಲಿ ಫೋಟೊದ ರಹಸ್ಯ ಬಯಲು

Pinterest LinkedIn Tumblr

pjimage-1

ಚೆನ್ನೈ: ಅನಾರೋಗ್ಯಕ್ಕೊಳಗಾಗಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಅವರದ್ದು ಎನ್ನಲಾದ ಚಿತ್ರವೊಂದು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಅದರ ಅಸಲಿಯತ್ತು ಬಯಲಾಗಿದ್ದು, ಚಿತ್ರ ಪೆರುವಿನ ಆಸ್ಪತ್ರೆಯ ಐಸಿಯು ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಚಿತ್ರ ಎಂಬ ಅಂಶ ಭಾನುವಾರ ಬೆಳಕಿಗೆ ಬಯಲಾಗಿದೆ. ಅಲ್ಲದೆ, ಚಿತ್ರ ಎಂಟು ವರ್ಷಗಳಷ್ಟು ಹಿಂದಿನದ್ದು ಎನ್ನಲಾಗಿದೆ.

ಪೆರು ರಾಜಧಾನಿ ಲಿಮಾದಲ್ಲಿರುವ ಎಸ್‌ಸಾಲುದ್ (ಉಖಚ್ಝ್ಠ) ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ 2009ರ ಆ.20ರಂದು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಚಿತ್ರ ಅದಾಗಿದ್ದು, ಆಸ್ಪತ್ರೆಯ ವೆಬ್‌ಸೈಟ್‌ನಲ್ಲಿಯೂ ಮಹಿಳೆ ಫೋಟೋ ಪ್ರಕಟಿಸಲಾಗಿದೆ ಎಂದು ‘ದ ನ್ಯೂಸ್ ಮಿನಿಟ್’ ವರದಿ ಮಾಡಿದೆ.

ಆರೋಗ್ಯ ಸುಧಾರಣೆ: ಈ ನಡುವೆ ಜಯಲಲಿತಾ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಅವರು ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆಡಳಿತಾರೂಡ ಎಐಎಡಿಎಂಕೆ ವಕ್ತಾರೆ ಸಿ.ಆರ್.ಸರಸ್ವತಿ ತಿಳಿಸಿದ್ದಾರೆ. ಸರ್ಕಾರ ಯಾವ ರೀತಿ ನಡೆಯಬೇಕು ಎಂದು ಜಯಾ ಅವರು ಆಸ್ಪತ್ರೆಯಿಂದಲೇ ಸಲಹೆ ಸೂಚನೆ ನೀಡುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

Comments are closed.