ಕರ್ನಾಟಕ

ಅಂತರರಾಜ್ಯ ನದಿ ನೀರು ಹಂಚಿಕೆಯಲ್ಲಿ ವಿಷಯದಲ್ಲಿ ಸುಪ್ರೀಂ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ

Pinterest LinkedIn Tumblr

s-supreme-courtಬೆಂಗಳೂರು, ಸೆ.15-ಯಾವುದೇ ಅಂತಾರಾಜ್ಯ ನದಿಯ ಅಥವಾ ನದಿ ಕಣಿವೆಯ ಅಥವಾ ನದಿಯಲ್ಲಿನ ಅಥವಾ ನದಿ ಕಣಿವೆಯಲ್ಲಿನ ನೀರಿನ ಬಳಕೆ, ಹಂಚಿಕೆ ಅಥವಾ ನಿಯಂತ್ರಣಕ್ಕೆ ಸಂಬಂಸಿದ ಯಾವುದೇ ವಿವಾದ ಅಥವಾ ದೂರಿನ ಬಗ್ಗೆ ನ್ಯಾಯ-ನಿರ್ಣಯ ಮಾಡುವುದಕ್ಕಾಗಿ ಸಂಸತ್ ಕಾನೂನಿನ ಮೂಲಕ ಉಪಬಂಸಬಹುದು ಎಂದು ಅನುಚ್ಛೇದ-262ರಲ್ಲಿ ಉಲ್ಲೇಖಿಸಲಾಗಿದೆ.

ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ತೀರ್ಪು ನೀಡುವಂತಿಲ್ಲ. ಅನುಚ್ಛೇದ-262 ಅಂತಾರಾಜ್ಯ ನದಿಗಳ ಅಥವಾ ನದಿ-ಕಣಿವೆಗಳ ಜಲಸಂಬಂ ವಿವಾದಗಳಲ್ಲಿ ನ್ಯಾಯ-ನಿರ್ಣಯಗಳನ್ನು ನೀಡಿರುವ ಬಗ್ಗೆ ಈ ಉಲ್ಲೇಖವಿದ್ದು, ಸಂವಿಧಾನದಲ್ಲಿ ಏನೇ ಇದ್ದಾಗ್ಯೂ (1ನೇ) ಖಂಡದಲ್ಲಿ ಉಲ್ಲೇಖಿಸಿದ ಯಾವುದೇ ವಿವಾದ ಅಥವಾ ದೂರಿನ ಸಂಬಂಧದಲ್ಲಿ ಸರ್ವೋಚ್ಛ ನ್ಯಾಯಾಲಯವು ಅಥವಾ ಇತರೆ ಯಾವುದೇ ನ್ಯಾಯಾಲಯವು ಅಕಾರ ವ್ಯಾಪ್ತಿಯನ್ನು ಚಲಾಯಿಸತಕ್ಕದ್ದಲ್ಲವೆಂದು ಸಂಸತ್ ಕಾನೂನಿನ ಮೂಲಕ ಉಪಬಂಸಬಹುದಾಗಿದೆ.

Comments are closed.