ರಾಮನಗರ: ತಾಲ್ಲೂಕಿನ ಹೆಗ್ಗಡೆಗೆರೆ ಗ್ರಾಮದಲ್ಲಿ ಕುಮಾರ ಎಂಬ ಯುವಕ ಗುರುವಾರ ಮೊಬೈಲ್ ಟವರ್ ಏರಿದ್ದು, ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಲಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಇಟ್ಟಿದ್ದಾನೆ.
ಸ್ಥಳಕ್ಕೆ ಜನಪ್ರತಿನಿಧಿಗಳು ಬಂದು ಭರವಸೆ ನೀಡುವಂತೆ ಪಟ್ಟು ಹಿಡಿದಿದ್ದಾನೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಯುವಕನ ಮನವೊಲಿಸುವಲ್ಲಿ ನಿರತರಾಗಿದ್ದಾರೆ.
ಜಿಲ್ಲಾಧಿಕಾರಿ ಮಧ್ಯಪ್ರವೇಶ ಮತ್ತು ಸಂಧಾನದ ಬಳಿಕ ಟವರ್ನಿಂದ ಯುವಕ ಕೆಳಗಿಳಿದಿದ್ದಾನೆ.
Comments are closed.