
ಬೆಂಗಳೂರು,ಸೆ.೧೫-ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ಕಾವೇರಿ ಕಿಚ್ಚು ಇನ್ನೂ ತಣ್ಣಗಾಗಿಲ್ಲ.ಬಂದ್,ಪ್ರತಿಭಟನೆ ಬಳಿಕ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ನಡೆಸಿದ ರೈಲು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಪೊಲೀಸರ ಕಟ್ಟೆಚ್ಚರದಿಂದಾಗಿ ರೈಲು ಸಂಚಾರಕ್ಕೆ ಯಾವುದೇ ಅಡ್ಡಿ ಆತಂಕವಿಲ್ಲದೆ ಅಭಾದಿತವಾಗಿತ್ತು.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ,ಯಶವಂತಪುರ,ಕಂಟೋನ್ಮೆಂಟ್ ರೈಲು ನಿಲ್ದಾಣ,ಮಂಡ್ಯ,ಮೈಸೂರು,ತುಮಕೂರು,ಹುಬ್ಬಳ್ಳಿ,ದಾವಣಗೆರೆ,ಶಿವಮೊಗ್ಗ ಸೇರಿದಂತೆ ರಾಜ್ಯದೆಲ್ಲಡೆ ಇಂಡೋ-ಟಿಬೆಟಿಯನ್,ಕ್ಷಿಪ್ರ ಕಾರ್ಯಾಚರಣೆ ಪಡೆ, ಸಶಸ್ತ್ರ ಸೀಮಾಬಲ,ರೈಲ್ವೆ ಪೊಲೀಸರ ಜೊತೆಗೆ ರಾಜ್ಯ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ಬಿಗಿ ಭದ್ರತೆ ಭದ್ರತೆ ಕಲ್ಪಿಸಿದ ಹಿನ್ನೆಲೆಯಿಂದಾಗಿ ರೈಲುಗಳು ನಿಗಧಿಯಂತೆ ಸಂಚರಿಸಿದವು. ಇದರಿಂದಾಗಿ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಬೆಂಗಳೂರಿನ ೧೬ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರಿ ಮಾಡಿದ್ದ ಕರ್ಫ್ಯೂ ಹಿಂಪಡೆದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಸೆ.೨೫ರ ಮಧ್ಯರಾತ್ರಿಯ ತನಕ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು ಅಗತ್ಯ ಬಂದೋಬಸ್ತ್ ಮಾಡಲಾಗಿದೆ.
ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ರೈಲು ಬಂದ್ ಹಿನ್ನೆಲೆಯಲ್ಲಿ ರೈಲು ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ ವಿವಿಧ ಕನ್ನಡ ಪರ ಸಂಘಟನೆಯ ಕಾರ್ಯಕರ್ತರನ್ನು ಮಂಡ್ಯ,ಕೋಲಾರ,ಚಿಕ್ಕಬಳ್ಳಾಪುರ,ದೊಡ್ಡ ಬಳ್ಳಾಪು,ಶಿವಮೊಗ್ಗ,ಧಾರವಾಡ, ತುಮಕೂರು ಸೇರಿದಂತೆ ವಿವಿಧೆಡೆ ಬಂಧಿಸಲಾಗಿದೆ. ಉಳಿದಂತೆ ಬಾಗಲಕೋಟೆ, ಹುಬ್ಬಳ್ಳಿ, ವಿಜಯಪುರ,ಕೊಪ್ಪಳ,ಮೈಸೂರು,ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೆಳಿಗ್ಗೆ ೬ ಗಂಟೆಯಿಂದಲೇ ರೈಲುಗಳು ನಿಗಧಿಯಂತೆ ಸಂಚಾರ ನಡೆಸಿದವು ಆದರೆ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.
ಬೆಂಗಳೂರಿನಲ್ಲಿ ಕನ್ನಡ ಒPಕ್ಕೂಟದ ವಾಟಾಳ್ ನಾಗರಾಜ್, ಸಾ,ರಾ ಗೋವಿಂದು,ಪ್ರವೀಣ್ ಕುಮಾರ್ ಶೆಟ್ಟಿ ಸೇರಿದಂತೆ ವಿವಿಧ ನಾಯಕರು ಹಾಗು ಮಂಡ್ಯದಲ್ಲಿ ಕದಂಬ ಸೇನೆ,ಶಿವಮೊಗ್ಗದಲ್ಲಿ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಗು ಧಾರವಾಡದಲ್ಲಿ ಮನಸೂರ ಮಠದ ಬಸವರಾಜ ದೇವರು ಸೇರಿದಂತೆ ನೂರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಅಲ್ಲದೆ ರೈಲು ಬಂದ್‌ಗೆ ರೈಲ್ವೆ ಅಧಿಕಾರಿಗಳು ರೈಲು ತಡೆಗೆ ಅವಕಾಶ ನೀಡಿರಲಿಲ್ಲ.
ಕನ್ನಡ ಪರ ಕಾರ್ಯಕರ್ತರ ಬಂದ್ ಕರೆ ಹಿನ್ನೆಲೆಯಲ್ಲಿ ಬೆಂಗಳೂರಿನ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಸೇರಿದಂತೆ ನಗರದ ವಿವಿದೆಡೆ ಕೆಎಸ್‌ಆರ್‌ಪಿ,ಆರ್‌ಎಎಫ್ ಸೇರಿದಂತೆ ೧೫ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.ಇನ್ನುಳಿದ ಜಿಲ್ಲೆಗಳಲ್ಲಿ ಪ್ರತಿ ರೈಲು ನಿಲ್ದಾಣದಲ್ಲಿ ೩೦೦ ಕ್ಕೂ ಹೆಚ್ಚು ಪೊಲೀಸರ ಜೊತೆಗೆ ಮುಫ್ತಿಯಲ್ಲಿ ನೂರಾರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.
ರೈಲು ರೋಖೋ ಭಯದಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಾರದ ಹಿನ್ನೆಲೆಯಲ್ಲಿ ಚಾಮುಂಡಿ ಎಕ್ಸ್‌ಪ್ರೆಸ್, ಅರಸೀಕೆರೆ ಎಕ್ಸ್‌ಪ್ರೆಸ್,ಬೆಂಗಳೂರು-ಪಾಟಲೀ ಪುತ್ರ ಎಕ್ಸ್‌ಪ್ರೆಸ್,ಶತಾಬ್ದಿ,ಏರ್ನಾಕುಲಂ,ಲಾಲಾಬಾಗ್ ಎಕ್ಸೆಪ್ರೆಸ್,ಚಾಮರಾಜನಗರ ಎಕ್ಸ್‌ಪ್ರೆಸ್, ಚೆನ್ನೈ-ಮೈಸೂರು ಎಕ್ಸ್‌ಪ್ರೆಸ್ ಸೇರಿದಂತೆ ವಿವಿಧ ರೈಲುಗಳು ಖಾಲಿ ಖಾಲಿಯಾಗಿಯೇ ಸಂಚರಿಸಿದವು.
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಕ್ರಮವನ್ನು ಖಂಡಿಸಿ ರಾಮನಗರ ಜಿಲ್ಲೆಯ ಹೆಗ್ಗಡಕೆರೆಯಲ್ಲಿ ಪ್ರಕಾಶ್ ಎನ್ನುವ ಯುವಕನೋರ್ವ ಮೊಬೈಲ್ ಟವರ್ ಪ್ರತಿಭಟನೆ ನಡೆಸಿದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿತ್ತು.ಮುನ್ನೆಚ್ಚರಿಕೆಯಿಂದಾಗಿ ಬಿಡದಿ ಪೊಲೀಸರು ಸ್ಥಳದಲ್ಲಿ ಅಂಬ್ಯುಲೆನ್ಸ್ ಸೇರಿದಂತೆ ಅಗತ್ಯ ಕ್ರಮ ಕೈಗೊಂಡಿದ್ದರು.
ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ಕೊಳ್ಳುವರು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಟನ್‌ಗಳಷ್ಟು ಈರುಳ್ಳಿ ರಾಶಿ ರಾಶಿ ಬಿದ್ದಿದ್ದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.ತಮಿಳುನಾಡಿನ ವರ್ತಕರು ಬಾರದ ಹಿನ್ನೆಲೆಯಲ್ಲಿ ಈರುಳ್ಳಿ ಹೊರರಾಜ್ಯಗಳಿಗೆ ಸರಬರಾಜಾಗಿಲ್ಲದೆ ತೊಂದರೆ ಅನುಭವಿಸುವಂತಾಯಿತು.
Comments are closed.