ರಾಷ್ಟ್ರೀಯ

6 ಗಂಟೆ ಚೆನ್ನಾಗಿ ನಿದ್ದೆ ಮಾಡಿದ್ರೆ ನಿಮ್ಮ ದಾಂಪತ್ಯ ಸೂಪರ್‌!

Pinterest LinkedIn Tumblr

couples-feet-in-hotelರಾತ್ರಿ ವೇಳೆ ಗಂಡನಿಗೂ-ಹೆಂಡತಿಗೂ ಚೆನ್ನಾಗಿ ನಿದ್ದೆ ಹತ್ತುತ್ತೆ, 6 ಗಂಟೆಗೂ ಹೆಚ್ಚು ಉತ್ತಮವಾಗಿ ನಿದ್ದೆ ಮಾಡ್ತಾರೆ ಅಂದ್ರೆ ಅವರ ದಾಂಪತ್ಯ ಸೂಪರ್ರಾಗಿದೆ ಅಂತಾನೇ ಅರ್ಥ! ಹಾಗಂತ ಸಮೀಕ್ಷೆಯೊಂದು ಹೇಳಿದೆ. ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾಲಯ ಈ ಸಮೀಕ್ಷೆ ನಡೆಸಿದ್ದು, ದಾಂಪತ್ಯ ಸುಖಕರವಾಗಿರಲು ದಂಪತಿಯ ಉತ್ತಮ ನಿದ್ದೆ ಕೂಡ ಅಗತ್ಯ ಎಂದು ಹೇಳಿದೆ.

ನಿದ್ದೆ ಇಲ್ಲದೇ ಇದ್ದರೆ ಅದು ಸಂಬಂಧದ ಮೇಲೆ ನೇರ ಪರಿಣಾಮ ಬೀರುತ್ತದೆ, ಬಿರುಕಿಗೂ ಕಾರಣವಾಗಬಹುದು ಎಂದು ಹೇಳಲಾಗಿದೆ. ಸಮೀಕ್ಷೆಗಾಗಿ ಹೊಸದಾಗಿ ಮದ್ವೆಯಾದ 68 ಮಂದಿ ದಂಪತಿಯನ್ನು ಸಂದರ್ಶಿಸಲಾಗಿದೆ. 7 ದಿನಗಳ ಕಾಲ ಅವರ ಮೇಲೆ ನಿಗಾ ವಹಿಸಲಾಗಿದ್ದು, ಎಷ್ಟು ಗಂಟೆ, ಎಷ್ಟು ಚೆನ್ನಾಗಿ ನಿದ್ದೆ ಮಾಡುತ್ತಾರೆ, ಎಂಬುದನ್ನು ಗಮನಿಸಲಾಗಿದೆ.

ಆ ಪ್ರಕಾರ ನಮ್ಮ ದಾಂಪತ್ಯದಲ್ಲಿ ಸಮಾಧಾನವಿದೆ ಎಂದು ಹೇಳಿದವರು ಚೆನ್ನಾಗಿ ನಿದ್ದೆ ಮಾಡಿದವರಂತೆ. ಯಾಕೋ ಸರಿಯಿಲ್ಲ ಎಂದವರಿಗೆ ನಿದ್ದೆಯೂ ಸರಿಯಿಲ್ಲ ಎನ್ನುವುದು ಗೊತ್ತಾಗಿದೆ.

ಉತ್ತಮವಾದ ನಿದ್ದೆಯಿಂದ ಮನಸ್ಸು ಹಗುರಾಗುತ್ತದೆ. ಸಂಬಂಧದ ಮೇಲೆ ಋಣಾತ್ಮಕ ಪರಿಣಾಮ ಬೀರುವುದು ದೂರಾಗುತ್ತದೆ ಎಂದು ಸಮೀಕ್ಷೆ ಹೇಳಿದೆ.

ಫ‌ಲಿತಗಳು…
ಚೆನ್ನಾಗಿ ನಿದ್ದೆ ಮಾಡಿದ್ರೆ, ದಾಂಪತ್ಯ ಅತಿ ಮಧುರ ಅನುರಾಗ!

ಚೆನ್ನಾಗಿ ನಿದ್ದೆ, ದಂಪತಿ ಮನಸ್ಸು ಹಗುರಾಗಲು ನೆರವಾಗುತ್ತೆ.

ನಿದ್ದೆ ಚೆನ್ನಾಗಿಲ್ಲದವರ ಮೇಲೆ ಋಣಾತ್ಮಕ ಪರಿಣಾಮ ಇದು ವೈವಾಹಿಕ ಜೀವನಕ್ಕೆ ಸಮಸ್ಯೆ! ದಾಂಪತ್ಯದಲ್ಲಿ ಬಿರುಕಿಗೂ ನಿದ್ದೆ ಕಾರಣವಾಗಬಹುದು:ಸಮೀಕ್ಷೆ ಎಚ್ಚರಿಕೆ.

-ಉದಯವಾಣಿ

Comments are closed.