ಕರ್ನಾಟಕ

ರೈಫಲ್‌ನಲ್ಲಿ ಆಟ ಪ್ರಾಣಕ್ಕೆ ಕುತ್ತು ತಂದುಕೊಂಡ ಪೇದೆ

Pinterest LinkedIn Tumblr

rameshಬೆಂಗಳೂರು, ಸೆ. ೧೪- ಕುಡಿದ ಅಮಲಿನಲ್ಲಿ ಕರ್ತವ್ಯ ನಿರತ ಪೇದೆಯೋರ್ವ ರೈಫಲ್‌ನಲ್ಲಿ ಆಟ ಆಡಲು ಹೋಗಿ ತಾನೇ ತನ್ನ ಹೊಟ್ಟೆಗೆ ಶೂಟೌಟ್ ಮಾಡಿಕೊಂಡು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳೆಯ ಕೆಲಸದಲ್ಲಿದ್ದ ವೇಳೆ ರೈಫಲ್‌ನಲ್ಲಿ ಶೂಟೌಟ್ ಮಾಡಿಕೊಂಡಿದ್ದು ಹೊಟ್ಟೆಗೆ ಗಂಭೀರವಾಗಿ ಗಾಯಗೊಂಡಿರುವ ರಮೇಶ್ (೪೦) ಅವರನ್ನು ಹೆಬ್ಬಾಳ ಬಳಿಯ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ.
ಕಂಠಪೂರ್ತಿ ಕುಡಿದು ಠಾಣೆಯಲ್ಲಿ ಕೆಲಸಕ್ಕೆ ಬಂದಿದ್ದ ರಮೇಶ್ ಅವರು ರೈಫಲ್‌ನಲ್ಲಿ ಆಟವಾಡಲು ಹೋಗಿ ಅಕಸ್ಮಿಕವಾಗಿ ಗುಂಡು ಹಾರಿ ಅದು ಅವರ ಹೊಟ್ಟೆಗೆ ತಗುಲಿದೆ ಕೂಡಲೇ ಠಾಣೆಯಲ್ಲಿದ್ದ ಇತರ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ದಾಖಲಿಸಲಿಸಿದ್ದಾರೆ ರಮೇಶ್ ಅವರ ಸ್ಥಿತಿ ಗಂಭೀರವಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಎಸ್‌ಪಿ ಅಮೀತ್ ಸಿಂಗ್ ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪರಿಚಿತ ವಾಹನ ಹರಿದು ಗಾರೆ ಮೇಸ್ತ್ರಿ ಸಾವು
ಬೆಂಗಳೂರು,ಸೆ.೧೪-ಬಸ್ ಹತ್ತಲು ರಸ್ತೆ ದಾಟಿಕೊಂಡು ಹೋಗುತ್ತಿದ್ದ ಗಾರೆ ಮೇಸ್ತ್ರಿಯೊಬ್ಬರು ಅಪರಿಚಿತ ವಾಹನ ಹರಿದು ಮೃತಪಟ್ಟಿರುವ ದುರ್ಘಟನೆ ಕೆಆರ್‌ಪುರಂನ ಟಿನ್ ಫ್ಯಾಕ್ಟರಿ ಬಳಿ ನಿನ್ನೆ ರಾತ್ರಿ ನಡೆದಿದೆ.
ಕಮ್ಮಗೊಂಡನಹಳ್ಳಿಯ ಆರುಲು ವೆಂಕಟೇಶ್ವರಲು(೩೪)ಮೃತಪಟ್ಟವರು,ಆಂಧ್ರದ ನೆಲ್ಲೂರು ಮೂಲದ ವೆಂಕಟೇಶ್ವರಲು ಅವರು ರಾತ್ರಿ ೧೧.೩೦ರ ವೇಳೆ ನೆಲ್ಲೂರಿಗೆ ಹೋಗಲು ಟಿನ್ ಫ್ಯಾಕ್ಟರಿ ಬಳಿ ಬಸ್‌ಗಾಗಿ ಬಂದಿದ್ದರು.
ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಕಳೆದ ಕೆಲ ವರ್ಷಗಳಿಂದ ಕಮ್ಮಗೊಂಡನಹಳ್ಳಿಯಲ್ಲಿ ವಾಸಿಸುತ್ತಿದ್ದ ಅವರು ಗಾರೆ ಮೇಸ್ತ್ರಿಯಾಗಿ ಕೆಲಸ ಮಾಡಿಸುತ್ತಿದ್ದರು.ಪ್ರಕರಣ ದಾಖಲಿಸಿರುವ ಕೆಆರ್‌ಪುರಂ ಸಂಚಾರ ಪೊಲೀಸರು ಮುಂದಿನ ಅಪಘಾತವೆಸಗಿ ಪರಾರಿಯಾಗಿರುವ ವಾಹನಕ್ಕಾಗಿ ಶೋಧ ಕೈಗೊಂಡಿದ್ದಾರೆ.

Comments are closed.