ಕಾವೇರಿ ನದಿ ವಿಚಾರದಲ್ಲಿ ವಿವಾದ ಭುಗಿಲೆದ್ದಿದ್ದ ಕಾರಣ ಸ್ಥಗಿತಗೊಂಡಿದ್ದ ತಮಿಳುನಾಡು-ಕರ್ನಾಟಕ ನಡುವಿನ ಬಸ್ ಸಂಚಾರ ಮತ್ತೆ ಆರಂಭವಾಗಿದೆ.
ಕಳೆದ ಮಂಗಳವಾರದಿಂದ ಉಭಯ ರಾಜ್ಯಗಳ ನಡುವಿನ ಬಸ್ ಸಂಚಾರ ನಿಂತಿತ್ತು. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ತಮಿಳುನಾಡಿಗೆ ತೆರಳಿದ್ದರೂ ತಮಿಳುನಾಡಿನಿಂದ ಬಸ್ಗಳು ರಾಜ್ಯಕ್ಕೆ ಬರುತ್ತಿರಲಿಲ್ಲ. ಕರ್ನಾಟಕದ ಗಡಿ ಭಾಗವಾದ ಹೊಸೂರಿನಿಂದ ಕೂಡ ಬಸ್ ಸಂಚಾರ ನಿಂತು ಹೋಗಿತ್ತು.
ಇಂದು ಬೆಳಗ್ಗೆ ತಮಿಳುನಾಡಿನಿಂದ ನಗರಕ್ಕೆ 35ಕ್ಕೂ ಅಧಿಕ ಬಸ್ಗಳು ಆಗಮಿಸಿವೆ. ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಚೆನ್ನೈ ಮುಂತಾದ ಭಾಗಗಳಿಂದ ಬಸ್ಗಳು ನಗರಕ್ಕೆ ಬಂದು ತಲುಪಿವೆ. ಇವೆಲ್ಲವೂ ಅತ್ತಿಬೆಲೆ ಟೋಲ್ ಕೇಂದ್ರದ ಮೂಲಕ ನಗರ ಪ್ರವೇಶಿಸಿವೆ.
Comments are closed.