ಕರ್ನಾಟಕ

ಡಿಜಿ,ಐಜಿಪಿ ಓಂ ಪ್ರಕಾಶ್ ಪುತ್ರನಿಂದ ಕಿರುಕುಳ ಆರೋಪ, ರೈತ ಶಿವಣ್ಣ ಆತ್ಮಹತ್ಯೆ

Pinterest LinkedIn Tumblr

omprakashಬೆಂಗಳೂರು: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ,ಐಜಿಪಿ) ಓಂ ಪ್ರಕಾಶ್ ಅವರ ಪುತ್ರ ಕಾರ್ತಿಕೇಶ್ ಅವರು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ರಾಮನಗರ ಜಿಲ್ಲೆಯ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಗವಿನಾಗಮಂಗಲ ರೈತ ಶಿವಣ್ಣ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಡಿಜಿ, ಐಜಿಪಿ ಪುತ್ರನ ವಿರುದ್ಧ ಹೇಳಿಕೆ ನೀಡಿರುವ ಶಿವಣ್ಣ, ನಾನು ನನ್ನ ಸಹೋದರ ಲೋಕೇಶ್ ಮಧ್ಯ ಜಮೀನು ವಿವಾದ ಇತ್ತು. ಆದರೆ ಕಾರ್ತಿಕೇಶ್ ಲೋಕೇಶ್ ಜಮೀನಿನಲ್ಲಿ ತಮ್ಮ ಕ್ವಾರಿ ಜಮೀನಿಗೆ ವಿಸ್ತರಿಸಿದ್ದರಿಂದ ಅವರಿಗೆ ಬೆಂಬಲ ನೀಡುತ್ತಿದ್ದರು. ಅಲ್ಲದೆ ಲೋಕೇಶ್ ವಿರುದ್ಧ ಕೇಸ್ ದಾಖಲಾಗದಂತೆ ನೋಡಿಕೊಳ್ಳುವ ಮೂಲಕ ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ಜುಲೈ 13, 2015ರಂದು ನನ್ನ ಸೋಹದರ ಲೋಕೇಶ್ ವಿರುದ್ಧ ದೂರು ದಾಖಲಿಸಿದ್ದೆ ಎಂದಿರುವ ಶಿವಣ್ಣ, ಹಲವು ಪೊಲೀಸ್ ಅಧಿಕಾರಿಗಳ ವಿರುದ್ಧವೂ ಆರೋಪ ಮಾಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸರುವ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು, ಕಳೆದ 15 ದಿನಗಳಿಂದ ನನ್ನ ವಿದೇಶದಲ್ಲಿದ್ದು, ಈ ಬಗ್ಗೆ ಇನ್ನೂ ಪುತ್ರನೊಂದಿಗೆ ಚರ್ಚಿಸಿಲ್ಲ ಎಂದಿದ್ದಾರೆ. ಅಲ್ಲದೆ ರಾಮನಗರ ಎಸ್ಪಿಯಿಂದ ಪ್ರಕರಣದ ಬಗ್ಗೆ ವಿವರಣೆ ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.

Comments are closed.