ರಾಷ್ಟ್ರೀಯ

ಹರಿಯಾಣದ ಮಹೇಂದ್ರಗಢ್ ನಲ್ಲಿ ಭೂಕಂಪ: ದೆಹಲಿಯಲ್ಲೂ ಭೂಕಂಪನದ ಅನುಭವ

Pinterest LinkedIn Tumblr

Delhi-earthquakeಮಹೇಂದ್ರಗಢ್: ಹರಿಯಾದ ಮಹೇಂದ್ರಗಢ್ ನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನ 2.50 ಗಂಟೆ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಭೂಕಂಪನದ ಕೇಂದ್ರಬಿಂದು ಕುರಿತಂತೆ ಈ ವರೆಗೂ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ, ಭೂಕಂಪವು ಭೂಮಿಯ 16 ಕಿ.ಮೀ ಆಳದಲ್ಲಿ ಸಂಭವಿಸಿರುವುದಾಗಿ ಪ್ರಾಥಮಿಕ ಭೂಕಂಪ ವರದಿಗಳು ತಿಳಿಸಿವೆ.

ಹರಿಯಾಣದ ಮಹೇಂದ್ರಗಢ್‌ನಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ದೆಹಲಿ, ಎನ್’ಸಿಆರ್ ನಲ್ಲೂ ಭೂಕಂಪನದ ಅನುಭವವಾಗಿದೆ ಎಂದು ಮೂಲಗಳು ತಿಳಿಸಿವೆ.

ಭೂಕಂಪದಲ್ಲಿ ಸಾವು-ನೋವುಗಳು ಸಂಭವಿಸಿರುವ ಕುರಿತಂತೆ ಈ ವರೆಗೂ ಯಾವುದೇ ವರದಿಗಳು ತಿಳಿದುಬಂದಿದೆ. ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Comments are closed.