ಫೈಸಲಾಬಾದ್: ರು.500 ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಕೋಪಗೊಂಡ ಅಣ್ಣನೊಬ್ಬ ತನ್ನ ಇಬ್ಬರು ತಮ್ಮಂದಿರಿಗೆ ಬೆಂಕಿ ಹಚ್ಚಿರುವ ಘಟನೆಯೊಂದು ಪಾಕಿಸ್ತಾನದ ಫೈಸಲಾಬಾದ್ ನಲ್ಲಿ ನಡೆದಿದೆ.
ಮುಷ್ತಕ್ ಬೆಂಕಿ ಹಚ್ಚಿದ ಅಣ್ಣನಾಗಿದ್ದು, ತಮ್ಮಂದಿರಾದ ಮೊಹಮ್ಮದ್ ಉಮರ್ ಮತ್ತು ಅಬು ಬಕರ್ ಬಳಿ ರು.500 ಹಣ ನೀಡುವಂತೆ ಕೇಳಿದ್ದಾನೆ. ಹಣ ನೀಡಲು ಉಮರ್ ಮತ್ತು ಅಬು ಬಕರ್ ನಿರಾಕರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಮ್ಮಂದಿರ ಮೇಲೆ ತೀವ್ರ ಕೋಪಗೊಂಡ ಮುಷ್ತಕ್ ಸ್ಥಳದಲ್ಲಿದ್ದ ಪೆಟ್ರೋಲ್’ನ್ನು ಹಾಕಿ, ಬೆಂಕಿ ಹಚ್ಚಿದ್ದಾನೆ. ನಂತರ ತಾನು ಕೂಡ ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಸ್ಥಳೀಯರು ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದೀಗ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವರದಿಗಳು ತಿಳಿಸಿವೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಮುಷ್ತಕ್ ಕುಟುಂಬಸ್ಥರು ತಪ್ಪಾಗಿ ಮಾಹಿತಿ ನೀಡಿದ್ದು, ಘಟನೆ ವೇಳೆ ಮುಷ್ತಕ್ ಮದ್ಯಪಾನ ಮಾಡಿ, ಪ್ರಜ್ಞಾಹೀನನಂತೆ ವರ್ತಿಸುತ್ತಿದ್ದ. ಈ ವೇಳೆ ತಾನು ಏನು ಮಾಡುತ್ತಿದ್ದೇನೆಂಬುದು ಆತನಿಗೇ ತಿಳಿದಿರಲಿಲ್ಲ ಎಂದು ಪ್ರಾಥಮಿಕ ತನಿಖಾ ವರದಿಯಲ್ಲಿ ಪೊಲೀಸರು ಹೇಳಿದ್ದಾರೆ.
Comments are closed.