ಕರ್ನಾಟಕ

ಮಗುವಿನಿಂದ ಫೈರಿಂಗ್: ಗೋವಿಂದಪ್ಪ ಕುತ್ತಿಗೆಗೆ ಗುಂಡು

Pinterest LinkedIn Tumblr

fireಬೆಂಗಳೂರು: ಆಕಸ್ಮಿಕವಾಗಿ ಮಗುವಿನ ಕೈಗೆ ಸಿಕ್ಕಿದ ಪಿಸ್ತೂಲಿನಿಂದ ಹಾರಿದ ಗುಂಡು ಗೋವಿಂದಪ್ಪ ಎಂಬುವರರ ಕುತ್ತಿಗೆಗೆ ತಾಗಿ ಅವರು ಆಸ್ಪತ್ರೆಗೆ ಸೇರಿದ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಇದು ಮುನಿರಾಜು ಎಂಬವರಿಗೆ ಸೇರಿದ್ದ ಲೈಸೆನ್ಸ್ಡ್‌ ಪಿಸ್ತೂಲು ಇದಾಗಿದ್ದು, ಗೋವಿಂದಪ್ಪ ಬೆಳಿಗ್ಗೆ ಮುನಿರಾಜುವನ್ನು ಕಾಣಲು ಅವರ ಮನೆಯ ಬಂದು ಅವರ ಜತೆ ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದಿದ್ದ ಮಗು ಪಿಸ್ತೂಲು ಕೈಲಿ ಹಿಡಿದು ಟ್ರಿಗರ್ ಒತ್ತಿದ್ದರಿಂದ ಹಾರಿದ ಗುಂಡು ಗೋವಿಂದಪ್ಪ ಅವರ ಕುತ್ತಿಗೆಗೆ ಬಡಿದಿತ್ತು. ಇತ್ತೀಚೆಗೆ ತಾನೆ ಗೋವಿಂದಪ್ಪ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು.

ಗೋವಿಂದಪ್ಪ ಅವರನ್ನು ಕೂಡಲೇ ಯಶವಂತಪುರ ಸಮೀಪ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Comments are closed.