ಬೆಂಗಳೂರು: ಪ್ರಧಾನಿ ಮೋದಿಯವರದ್ದು ಕೇವಲ ಜಾಹೀರಾತು ಸರ್ಕಾರ, ಅವರಿಗೆ ಮಾತೇ ಬಂಡವಾಳ, ಅದನ್ನೇ ಅವರು ಬಹುದೊಡ್ಡ ಸಾಧನೆ ಎಂದು ಕೊಂಡಿದ್ದಾರೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಕೆಪಿಸಿಸಿ ಕಛೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಭಾಗಿಯಾದ ಅವರು, ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಉತ್ಪಾದಿಸಿರುವ ವಿದ್ಯುತ್ತನ್ನು ಹಳ್ಳಿಗಳಿಗೆ ತಲುಪಿಸಿರುವ ಸಾಧನೆಯ್ನನೇ ತಮ್ಮದೆಂದು ತಿಳಿದುಕೊಂಡಿದ್ದಾರೆ, ತಮ್ಮದೆಂದು ಬಿಂಬಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಸಾಮಾನ್ಯ ಬಜೆಟ್ ಸೇರ್ಪಡೆ ಮಾಡುವ ನಿರ್ಧಾರ ಸರಿಯಲ್ಲ. ರೈಲ್ವೆ ಅಭಿವೃದ್ಧಿಯ ದೃಷ್ಟಿಯಿಂದ ಪ್ರತ್ಯೇಕ ಬಜೆಟ್ನ ಅಗತ್ಯತೆ ಖಂಡಿತಾ ಇದೆ. ಇಲಾಖೆಯ ಅಭಿವೃದ್ಧಿ ವೇಗ ಹೆಚ್ಚಬೇಕಂದರೆ ಪ್ರತ್ಯೇಕವಾಗಿ ಬಜೆಟ್ ಮಂಡಿಸುವ ಅಗತ್ಯತೆ ಇದೆ ಎಂದು ತಿಳಿಸಿದರು.
ಕಳೆದೆರೆಡು ವರ್ಷಗಳಿಂದ ದೇಶದಲ್ಲಿ ಉದ್ಯೋಗ ಸಷ್ಟಿಗೆ ಮುಂದಾಗಿಲ್ಲ ಎಂದ ಅವರು, ಮೋದಿ ಸರ್ಕಾರ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
Comments are closed.