ಬೆಂಗಳೂರು: ಇಲ್ಲಿನ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬರು ಕಾಲೇಜಿನಲ್ಲಿ ಲೈಂಗಿಕ ಕಿರುಕುಳ ಆಗುತ್ತಿದೆ ಎಂದು ಆರೋಪಿಸಿ ಆಲ್ಲೈನ್ ಪಿಟಿಷನ್ ಸಲ್ಲಿಸಿರುವ ಸಂಗತಿ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಈತನಕ ಯಾವುದೇ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಇಲ್ಲ.
ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಕಿರುಕುಳ ನೀಡುತ್ತಿದ್ದು, ಡೀನ್, ಮ್ಯಾನೇಜ್ವೆುಂಟ್ನ ಓರ್ವ ವ್ಯಕ್ತಿ ಹಾಗೂ ಇಂಗ್ಲಿಷ್ ವಿಭಾಗದ ಪ್ರೊಫೇಸರ್ ಒಬ್ಬರ ವಿರುದ್ಧ ಆರೋಪ ಮಾಡಿದ್ದಾರೆ. ‘ಯೂತ್ ಕಿ ಅವಾಜ್’ ವೆಬ್ಸೈಟ್ಗೆ ಆನ್ಲೈನ್ ಪಿಟಿಷನ್ ಸಲ್ಲಿಸಿರುವ ವಿದ್ಯಾರ್ಥಿನಿ ತನ್ನ ದೂರಿನಲ್ಲಿ ಈ ಬಗ್ಗೆ ವಿವರವಾಗಿ ಬರೆದಿದ್ದಾರೆ. ‘ಮ್ಯಾನೇಜ್ವೆುಂಟ್ನಲ್ಲಿ ಸಾಕಷ್ಟು ಪ್ರಭಾವಶಾಲಿ ಎನ್ನುವ ವ್ಯಕ್ತಿಯಿಂದ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿಯರು ಸಾಕಷ್ಟು ಮುಜುಗರ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆರಂಭದಲ್ಲಿ ಸಲುಗೆ ತೋರಿಸಿ, ಬಳಿಕ ಕ್ಯಾಂಪಸ್ಗೆ ಬರುವಾಗ ಆಕರ್ಷಕ ಉಡುಗೆಯನ್ನು ಧರಿಸಿ ಬನ್ನಿ ಎನ್ನುತ್ತಾರೆ. ಡ್ರೆಸ್ ಬಗ್ಗೆ ಮಾತುಗಳನ್ನೆತ್ತಿ, ಅಸಭ್ಯವಾಗಿ ವರ್ತಿಸುತ್ತಾರೆ. ಮೈ ಮೇಲೆ ಕೈ ಹಾಕಿ ಅಸಹ್ಯಕರವಾಗಿ ನಡೆದುಕೊಳ್ಳುತ್ತಾರೆ’ ಎಂದು ಆರೋಪಿದ್ದಾರೆ.
ಅವರಂತೆಯೇ ಡೀನ್ ಹಾಗೂ ಇಂಗ್ಲಿಷ್ ವಿಭಾಗ ಪ್ರೊಫೇಸರ ಒಬ್ಬರು ಇದೇ ರೀತಿ ವರ್ತಿಸುತ್ತಾರೆ. ತರಗತಿಯಲ್ಲಿಯೇ ಅಸಭ್ಯತೆ ತೋರುತ್ತಾರೆ. ವಿದ್ಯಾರ್ಥಿನಿಯರಿಗೆ ಕ್ಲಾಸ್ ರೂಂನಲ್ಲಿಯೇ ಕೆಟ್ಟದಾಗಿ ಹೇಳಿ ಅವಹೇಳನ ಮಾಡುತ್ತಾರೆ. ಕ್ಯಾಂಪಸ್ನಲ್ಲಿ ಇಂತವರಿಂದ ವಿದ್ಯಾರ್ಥಿನಿಯರು ತೀವ್ರವಾದ ಮುಜುಗರಕ್ಕೆ ಒಳಗಾಗಬೇಕಾಗಿ ಬಂದಿದೆ. ದೌರ್ಜನ್ಯ ಎದುರಿಸಬೇಕಾದ ಸ್ಥಿತಿ ನಿರ್ವಣವಾಗಿದೆ. ಆದರೆ ಯಾರೂ ಕೂಡ ಭಯದಿಂದ ಅವರ ವಿರುದ್ಧ ದೂರು ನೀಡುವ ಧೈರ್ಯ ತೋರುತ್ತಿಲ್ಲ ಎಂದು ಆರೋಪಿಸಿ ಪಿಟಿಷನ್ ಸಲ್ಲಿಸಿದ್ದಾರೆ.
ಈ ಪ್ರಕರಣ ಈಗ ಕ್ಯಾಂಪಸ್ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದ್ದು, ಸತ್ಯಾಸತ್ಯತೆ ತನಿಖೆಯಿಂದಲೇ ಹೊರಬರಬೇಕಿದೆ.
Comments are closed.